ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ ತತ್ಪದವೆಂದಡೇನಯ್ಯ ? ತ್ವಂ ಪದವೆಂದಡೇನಯ್ಯ ? ಅಸಿಪದವೆಂದಡೇನಯ್ಯ ? ತತ್ಪದವೆಂದಡೆ ಲಿಂಗ, ತ್ವಂ ಪದವೆಂದಡೆ ಅಂಗ, ಅಸಿಪದವೆಂದಡೆ ಲಿಂಗಾಂಗಸಂಯೋಗವಯ್ಯ. ಇಂತೀ ತ್ರಿವಿಧವನು ಮೀರಿದಾತ ಸ್ವಾನುಭಾವ ಸಂಪನ್ನ, ಸ್ವಯಂಭು ತಾನೆ. ಅಖಂಡದಾಕಾರ ಆದಿವಸ್ತು ತಾನೆಂದರಿಯದೆ ತತ್ಪದವೆ ಲಿಂಗವೆಂದು ಬೆರತಿಪ್ಪರು ಆ ಲಿಂಗ ತಮಗೆಲ್ಲಿಯದು ? ಅಸಿಪದವೆ ಲಿಂಗಾಂಗಸಂಯೋಗವೆಂಬರು. ಆ ಲಿಂಗಾಂಗಸಂಯೋಗ ತಮಗೆಲ್ಲಿಯದು ? ಲಿಂಗ ತಮ್ಮದೆಂಬರು, ಪೃಥ್ವಿಯ ಹಂಗು. ಅಂಗ ತಮ್ಮದೆಂಬರು, ಅಪ್ಪುವಿನ ಹಂಗು. ಜ್ಞಾನ ತಮ್ಮದೆಂಬರು, ತೇಜದ ಹಂಗು. ಇಂತೀ ತ್ರಿವಿಧದ ಹಂಗ ಹರಿದು ಲಿಂಗವೆ ತಾನಾದ ಬಸವಣ್ಣ ಸಾಕ್ಷಿಯಾಗಿ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಾಯಿತ್ತು.
--------------
ಬಾಚಿಕಾಯಕದ ಬಸವಣ್ಣ
ರುಜೆ ರೋಗಂಗಳು ಲಿಂಗದೇಹಿಗಳೆಂಬವರ ಸೋಂಕಿದಲ್ಲಿ, ರೋಗದ ಇಚ್ಫೆಯನರಿದು ನೆರಳಿದಲ್ಲಿ, ಲಿಂಗದ ಚಿತ್ತವೆತ್ತಹೋಯಿತ್ತು ? ಪಂಚಾಕ್ಷರಿ ಪ್ರಣವ ನಷ್ಟವಾಯಿತ್ತು. ಅರ್ಚನೆಯ ಪೂಜೆ ಕೆಟ್ಟಿತ್ತು. ಕೃತ್ಯದ ನೇಮ ಭ್ರಷ್ಟವಾಯಿತ್ತು. ಇಂತಿವರ ಲಿಂಗದೇಹಿಗಳೆಂದಡೆ ಲಿಂಗಸಂಗಿಗಳೊಪ್ಪುವರೆ ? ಈ ಗುಣ ಸಂಗನಬಸವಣ್ಣಂಗೆ ದೂರ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗಕ್ಕೆ ದೂರ.
--------------
ಬಾಚಿಕಾಯಕದ ಬಸವಣ್ಣ