ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾಲಗಾರಂಗೆ ಸುವರ್ಣದ ವಳಿಯನರಿದು ತೊಳೆಯಬೇಕು. ಬಲೆಗಾರಂಗೆ ಮತ್ಸ್ಯದ ಬೆಂಬಳಿಯನರಿದು ಕಲ್ಲಿಯ ವಳಿಯನಿಡಬೇಕು. ಶಬರಂಗೆ ಸಂಭ್ರಮವ ಬಿಟ್ಟು, ತರು ಲತೆ ಪರ್ಣಂಗಳಂತಿರಬೇಕು. ಇಂತೀ ಹೊಲಬಿನ ತೆರನಂತೆ ಗುಣವಿವರವನರಿದು, ಆರಾರ ಇರವಿನ ತೆರನ ಪರಿಹರಿಸಿ, ತಾ ಸರಿಸವಾಗಿ ನಿರುತಿಗಳ ನಿಜವನರಿದು, ಪೂಸರ ಆಶೆಯನರಿದು, ವೇಷಗಳ್ಳರ ನಿಹಿತವ ನೋಡಿ, ವಾಚಕರ ಪರಿಹಾಸಕರ ನೀತಿಯ ತಿಳಿದು, ಮತ್ತಾವ ರೀತಿನೀತಿಗಳಲ್ಲಿಯೂ ಮಾತ ತಾರದೆ, ತನ್ನ ಸುನೀತವನೆ ಬೀರಿ, ತನ್ನ ಸದ್ಗುಣ ರೀತಿಯನೆ ತೋರಿ, ತನ್ನ ಸುಗುಣವಾಸನೆಯನೆ ತೀವಿ, ಸತ್ಕುಲಭಕ್ತಿಯ ಕುಲರೀತಿಗೆ ತನ್ನ ಸತ್ಯವನೆ ಸಾರಿಯಿಪ್ಪಾತ ತ್ರಿವಿಧದವನಲ್ಲ, ಅರಿಷಡ್ವರ್ಗಂಗಳೊಳು ನಿಲ್ಲ. ಪಂಚೇಂದ್ರಿಯಂಗಳ ಸಂಚಿತ ಸುಖದವನಲ್ಲ. ಮಿಕ್ಕಾದ ಬಹುವಿಷಯದ ಗೊಂಚಲ ತೊಂಬೆಯವಗಿಲ್ಲ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನೆ.
--------------
ಬಾಚಿಕಾಯಕದ ಬಸವಣ್ಣ