ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿಯ ಮರೆಯ ಸುವರ್ಣದಂತೆ ಚಿಪ್ಪಿನ ಮರೆಯ ಮುತ್ತಿನಂತೆ ಅಪ್ಪುವಿನ ಮರೆಯ ಅಗ್ನಿಯಂತೆ ಒಪ್ಪದೊಳಗಣ ಮಹಾಪ್ರಕಾಶದಂತೆಯಿಪ್ಪ ಘನಲಿಂಗವನರಿಯೆ. ರುದ್ರ ಬ್ರಹ್ಮ ವಿಷ್ಣ್ವಾವದಿಗಳು ತಮ್ಮ ಆತ್ಮಜ್ಞಾನ [ನಿಶ್ಚಿಂ]ತೆಯೆಂಬ ನಿಜವ ನೀಗಾಡಿಕೊಂಡರು. ಇದನರಿಯದೆ ಆಚರಿಸುವರು, ಆರಿಗೂ ಅಳವಲ್ಲವಯ್ಯಾ. ಇಷ್ಟಪ್ರಾಣಭಾವಸಂಬಂದ್ಥಿಗಳಪ್ಪ ಸದ್ಭಾವಾಚಾರವೆಡೆಗೊಂಡ ಶರಣಂಗಲ್ಲದೆ ಮಿಕ್ಕಿನ ದುರಾಚಾರಿಗಳಿಗೆ ಸಾಧ್ಯವಲ್ಲ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.
--------------
ಬಾಚಿಕಾಯಕದ ಬಸವಣ್ಣ
ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು. ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ. ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ. ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ. ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ. ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು, ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ. ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ ಆ ಕುಂಭದೊಳಹೊರಗ ಕಾಣಬಹುದು. ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಯೋಗಕ್ಕೆ ಸಿಕ್ಕಲಿಲ್ಲವೆಂಬೆನು.
--------------
ಬಾಚಿಕಾಯಕದ ಬಸವಣ್ಣ
ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ ಸವಿಯುವ ಸವಿಯ ಸವಿದು ನೋಡುತ್ತಿರಲು ಒಂದು ಸ್ಥಾನವುಂಟು. ಆ ಸ್ಥಾನದೊಳಗೆ ದಿವ್ಯರತ್ನದ ಕುಂಭವುಂಟು. ಆ ಕುಂಭದೊಳಗೊಂದು ಮಹಾರತ್ನದ ಕಮಲವುಂಟು. ಆ ಕಮಲದೊಳಗಣ ಅನಾದಿ ಅಮೃತದೊಳಗೆ ನೇಹ.......ವ ಶುದ್ಧವ ಮಾಡಿ ಆ ಕಮಲದ ನನೆಯ ಹತ್ತಿ, ಇನಿದಾಗಿ ಉಂಡುಂಡು ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ ಕಾ[ಣಾ], ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ ನಿಶ್ಚಿಂತನು.
--------------
ಬಾಚಿಕಾಯಕದ ಬಸವಣ್ಣ
ಪರುಷವ ಸೋಂಕಿದ ಲೋಹಕ್ಕೆ ಮತ್ತೆ ಪರುಷದ ಹಂಗೇಕೆ ? ಸರ್ಪದಷ್ಟವಾದ ದೇಹಕ್ಕೆ ಕಟುತ್ವ ಮಧುರದ ರಸಂಗಳ ಪ್ರಮಾಣಿಸಬಲ್ಲುದೆ ? ಇಂತೀ ದೃಷ್ಟದಂತೆ ಲಿಂಗವಿದ್ದ ತನುವಿಂಗೆ ಅಷ್ಟೋತ್ತರಶತವ್ಯಾಧಿಗಳಲ್ಲಿ ಕಟ್ಟುವಡೆದು ಬಂಧನಕ್ಕೊಳಗಾಗುತ್ತ, ತಾಪತ್ರಯದಲ್ಲಿ ಸತ್ತು ಹುಟ್ಟುತ್ತ, ನಾನಾ ವಿಕಾರದಲ್ಲಿ ನಷ್ಟವಾಗುತ್ತ, ಮತ್ತೆ ಮಾತಿನ ವಾಸಿಗೆ ಮಿಟ್ಟೆಯ ಭಂಡರಂತೆ ಕಟ್ಟಿ ಹೋರುತ್ತ, ತಥ್ಯಮಿಥ್ಯದಲ್ಲಿ ಕುಕ್ಕುಳಗುದಿವುತ್ತ, ಮತ್ತೆ ಭಕ್ತವಿರಕ್ತರೆಂದು ಆತ್ಮತೇಜಕ್ಕೆ ಬಿಕ್ಕನೆ ಬಿರಿವುತ್ತ, ಇಂತೀ ಕೆಟ್ಟ ಕೇಡ ನೋಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಅಂಜಿ ನಷ್ಟವಾಗಿ ಹೋದ.
--------------
ಬಾಚಿಕಾಯಕದ ಬಸವಣ್ಣ