ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೂರಂಗುಲದಲ್ಲಿ ಅಳೆದು, ಐದಂಗುಲದಲ್ಲಿ ಪ್ರಮಾಣಿಸಿ ಆರಂಗುಲದಲ್ಲಿ ವಟ್ಟಕ್ಕೆ ಶುದ್ಧವಾಯಿತ್ತು. ಎಂಟರಳತೆ ಹದಿನಾರರ ಚದುರಸ ಮೂವತ್ತೆರಡರ ಮಧ್ಯದಲ್ಲಿ ಹಸ್ತಕಂಬಿಯನಿಕ್ಕಿ ಮೂರರಲ್ಲಿ ಭಾಗಿಸಲಾಗಿ, ಎರಡು ಒಳಗು ನಿಂದಿತ್ತು. ಒಂದು ಹೊರಗಾದ ಕೈಸಾಲೆಯಾಯಿತ್ತು. ಈ ಕೆಲಸವ ಹೊರಗೆ ಬಾಚಿಯಲ್ಲಿ ಸವೆದೆ, ಒಳಗೆ ಉಳಿಯಲ್ಲಿ ಸವೆದೆ. ಇಂತೀ ತೆರನ ತಿಳಿದಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ.
--------------
ಬಾಚಿಕಾಯಕದ ಬಸವಣ್ಣ
ಮಾತೆಯ ಆತ್ಮದಲ್ಲಿ ರೇತ ರಕ್ತವು ಕೂಡಿ ಕೆನ್ನೀರ ಮುತ್ತಿನಂತಾಯಿತ್ತಯ್ಯ. ಆ ಕೆನ್ನೀರ ಮುತ್ತು ವಿದ್ರುಮದಾಕಾರವಾಯಿತ್ತಯ್ಯ, ಆ ವಿದ್ರುಮದಾಕಾರ ಒಂದು ಹಿಡಿಯಾಯಿತ್ತಯ್ಯ. ಆ ಹಿಡಿಯಾದುದಕ್ಕೆ ಆಕಾರ ಅಂದವಾಗಿ ಓಂಕಾರ ಸ್ವರೂಪವಾಯಿತ್ತಯ್ಯ. ಆ ಓಂಕಾರಸ್ವರೂಪವಾದ ಪಿಂಡಕ್ಕೆ ನವಮಾಸ ತುಂಬಿ ತೆರಪಾದ ಬಾಗಿಲಲ್ಲಿ ಬಂದ ಆತ್ಮನ ಅಂಗವೆ ಅನುವಾಗಿ ಆಯತವಾಯಿತ್ತು. ಆ ಆಯತವಾದ ಆತ್ಮನು ತನ್ನ ಅಂಗದೊಳ ಹೊರಗೆ ನೋಡುತ್ತಿರಲು ಅಂಗವೆ ಪಾಣಿವಟ್ಟವಾಯಿತ್ತು, ಲಿಂಗವೆ ಶಿರಸ್ಸು ಆಯಿತ್ತು. ಆ ಶಿರಸ್ಸಿನೊಳಗೆ ಎರಡು ಜ್ಯೋತಿಯುಂಟು. ಆ ಎರಡು ಜ್ಯೋತಿಯ ನಡುಮಧ್ಯಸ್ಥಾನದಲ್ಲಿ ಒಂದು ಅಮೃತದ ಕಮಲವುಂಟು. ಆ ಕಮಲದೊಳಗಣ ಅಮೃತವನುಣಬಲ್ಲಡೆ ಆತನೆ ಪಿಂಡಾಂಡಜ್ಞಾನಿಯೆಂದಾತ ನಮ್ಮ ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವೆಂಬೆ.
--------------
ಬಾಚಿಕಾಯಕದ ಬಸವಣ್ಣ