ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾಯಿ ಮುಚ್ಚಿ ಉಂಡಡೆ ಸಾವಧಾನಿಯೆಂಬೆ. ಕಣ್ಣುಮುಚ್ಚಿ ನೋಡಿದಡೆ ಧ್ಯಾನಜ್ಞಾನಿಯೆಂಬೆ. ಅಂಗ ನಷ್ಟವಾಗಿ ಕೂಡಿದಡೆ ಲಿಂಗಾಂಗಿಯೆಂಬೆ. ಇಂತೀ ಭಾವಂಗಳಲ್ಲಿ ಭ್ರಮೆಯಿಲ್ಲದೆ, ಆವ ಜೀವಂಗಳಲ್ಲಿ ನೋವ ತಾರದೆ, ಚಿಂತೆ ಸಂತೋಷವೆಂಬ ಅಂತುಕಕ್ಕೊಳಗಾಗದೆ, ಭ್ರಾಂತರ ಕೂಡಿ ಭ್ರಮೆಗೊಳಗಾಗದೆ, ಕಾಂತೆಯರ ಕಲೆಯ ಬಲೆಯ ಒಳಗಾಗಿ ವಿಶ್ರಾಂತಿಯ ನೀಗಾಡಿಕೊಳ್ಳದೆ, ಸರ್ವರಲ್ಲಿ ಶಾಂತನಾಗಿ ನಿಗರ್ವಿಯಾಗಿ ನಿಃಕಳನಾಗಿ ನಿಜತತ್ವನಿಳಯ ನಿವಾಸನಾಗಿ ಪರಬ್ರಹ್ಮಲೋಕ ಆನಂದ ಅವಿರತನಾಗಿಪ್ಪಾತನೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣ.
--------------
ಬಾಚಿಕಾಯಕದ ಬಸವಣ್ಣ