ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಸುವಿಗೆ ಹಾಗ, ಎತ್ತಿಗೆ ಹಣವಡ್ಡ, ಕರುವಿಗೆ ಮೂರು ಹಣ, ಎಮ್ಮೆ ಕೋಣಕುಲವ ನಾ ಕಾಯಲಿಲ್ಲ. ಅವು ಎನ್ನ ತುರುವಿಗೆ ಹೊರಗು. ತೊಂಡು ಹೋಗದಂತೆ ಕಾದೊಪ್ಪಿಸುವೆ ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಹಸುವಿಂಗೊಂದು ಕಚ್ಚು, ಎತ್ತಿಂಗೆರಡು ಕಚ್ಚು, ಕರುವಿಂಗೆ ಮೂರು ಕಚ್ಚು. ಇಂತಿವ ನೋಡಿ ಮೇಯಿಸಿಕೊಂಡು ತೊಂಡುಹೋಗದಂತೆ ಕಾಯಿದೊಪ್ಪಿಸಬೇಕು ಗೋಪತಿನಾಥ ವಿಶ್ವೇಶ್ವರಲಿಂಗದರಿಕೆಯಾಗಿ.
--------------
ತುರುಗಾಹಿ ರಾಮಣ್ಣ
ಹಸುವಿಂಗೆ ಸಂಜ್ಞೆ, ಎತ್ತಿಂಗೆ ಮುಟ್ಟು, ಕರುವಿಂಗೆ ಲಲ್ಲೆ. ಇಂತೀ ತ್ರಿಗುಣದ ಇರವ, ತ್ರಿಗುಣಾತ್ಮಕ ಭೇದವ, ತ್ರಿಗುಣ ಭಕ್ತಿಯ ಮುಕ್ತಿಯ, ತ್ರಿಗುಣ ಘಟಾದಿಗಳ, ತ್ರಿಗುಣ ಮಲ ನಿರ್ಮಲಂಗಳ, ತ್ರಿಗುಣ ಸ್ವಯ ಚರ ಪರಂಗಳಲ್ಲಿ ತ್ರಿವಿಧ ಶಕ್ತಿ ತ್ರಿವಿಧ ಮುಕ್ತಿ ಇಂತೀ ತ್ರಿವಿಧಂಗಳೊಳಗಾಗಿ ಉತ್ಪತ್ಯ ಸ್ಥಿತಿ ಲಯ ತ್ರಿವಿಧದ ಹೆಚ್ಚು ಕುಂದನರಿತು, ಎತ್ತು ಹಸುವಿನ ಸಂಗದಿಂದ ಕರುವಾದ ತೆರನನರಿತು ಇಂತೀ ಒಂದರಲ್ಲಿ ಒಂದು ಕೂಡಲಿಕ್ಕೆ ಬಿಂದು ನಿಂದು ಕುರುಹಾದುದ ಕಂಡು ನೆನೆದು ನೆನೆಸಿಕೊಂಬುದದೇನೆಂದು ತಿಳಿದು, ಇಂತೀ ಅಂಡ ಪಿಂಡಗಳಲ್ಲಿ ನಿರಾತ್ಮನು ಆತ್ಮನಾಗಿ, ನಾನಾರೆಂಬುದ ತಾನರಿತು ತಿಳಿದಲ್ಲಿ ತುರುಮಂದೆಯೊಳಗಾಯಿತ್ತು. ಇದು ಗೋಪತಿನಾಥನ ಕೂಟ, ವಿಶ್ವನಾಥಲಿಂಗನ ಲೀಲಾಭಾವದಾಟ.
--------------
ತುರುಗಾಹಿ ರಾಮಣ್ಣ
ಹಸುವ ಕಾವಲ್ಲಿ ದೆಸೆಯನರಿತು, ಎತ್ತ ಕಾವಲ್ಲಿ ಪೃಥ್ವಿಯನರಿದು, ಕರುವ ಕಟ್ಟುವಲ್ಲಿ ಗೊತ್ತ ಕಂಡು ಧನವ ಕಾವಲ್ಲಿ ಸಜ್ಜನನಾಗಿ, ಜೀವಧನವ ಕಂಡಲ್ಲಿ ಮನ ಮುಟ್ಟದೆ, ಇಂತೀ ಭೇದೇಂದ್ರಿಯಂಗಳ ತುರುಮಂದೆಯಲ್ಲಿ ಕರು ಕಡುಸು ಎತ್ತು ಹಸುವಿನಲ್ಲಿ ಚಿತ್ರದ ವರ್ಣವನರಿಯಬೇಕು ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.
--------------
ತುರುಗಾಹಿ ರಾಮಣ್ಣ
ಹಸುವಿಂಗೆ ಹರವರಿ, ಎತ್ತಿಂಗೆ ಕಟ್ಟುಗೊತ್ತು, ಕರುವಿಂಗೆ ವಿಶ್ವತೋಮುಖವಾಗಿ ಹರಿವುತ್ತಿಪ್ಪ ಕರುವಿನ ಅರಿವ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಕಟ್ಟುವಡೆಯಬೇಕು.
--------------
ತುರುಗಾಹಿ ರಾಮಣ್ಣ
ಹಸುವಿಂಗೆ ಆರು ಬಾಯಿ, ಎತ್ತಿಂಗೆ ಮೂರು ಬಾಯಿ ಕರುವಿಂಗೆ ಒಂದು ಬಾಯಲ್ಲಿ ನಾನಾವರ್ಣದ ಹುಲ್ಲ ಮೇದು ನೀರಡಸಿ ನೆಟ್ಟಾಲೆ ನಿಂದುವು ಕಣ್ಣು. ಕರು ಸತ್ತ ಮತ್ತೆ ಹಸುವಿನ ಹಂಗಿಲ್ಲ. ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ ಕರುವಿನ ಹರಣ ಹೋಹುದಕ್ಕೆ ಮುನ್ನವೆ ಒಡಗೂಡಿ ಶುದ್ಧಿ ಯನೊಪ್ಪಿಸಬೇಕು.
--------------
ತುರುಗಾಹಿ ರಾಮಣ್ಣ