ಅಂಗಕ್ಕೆ ಲಿಂಗ ಆಚಾರ, ಲಿಂಗಕ್ಕೆ ಸರ್ವಕ್ರಿಯಾಸಂಬಂಧ ಆಚಾರ.
ಆ ಆಚಾರಕ್ಕೆಸರ್ವಗುಣ ವಿಚಾರದಿಂದ ಬೀಜ ನಿರ್ವೀಜನರಿದು
ಕಾಬುದು ಕಾಣಿಸಿಕೊಂಬ ಉಭಯವ ವೇದಿಸಿ
ಪರುಷ ಲೋಹವ ಗ್ರಹಿಸಿದಂತೆ ವಿಭೇದಕ್ಕೆ ಒಡಲಲ್ಲದೆ
ನಿಂದನೆಲೆ, ಲಿಂಗ ಪ್ರಾಣದ ಕೂಟ; ಇದು ವಿಶುದ್ಧಿ,
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ನಿಷ್ಟತ್ತಿಯಾದ ನಿರ್ವೇದ.