ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೆವದಿಂದ ಶರಣರ ಬಾಗಿಲಲ್ಲಿ ಹೋಗಿ ಕಟ್ಟಿದ ಹಸು ಕೂಡಿದ ಎತ್ತು ಬಿಡಿರೊ ಎಂದು ಕೂಗುತ್ತಿದ್ದೇನೆ. ಎನ್ನ ಕೂಗಿನ ದನಿಯಿಂದ ಮಹಾಶರಣರ ಸತಿ ಬಂದು ಕಟ್ಟಿದ ಹಸುವ ಬಿಟ್ಟು, ಕೂಡಿದ ಎತ್ತ ಕಡಹಿ ನಾಳೆ ಕೊಡಿಯೆಂದು ಹೊಡೆವುತಿದ್ದೇನೆ ಗೋಪತಿನಾಥ ವಿಶ್ವೇಶ್ವರಲಿಂಗದಡಿಗಾಗಿ.
--------------
ತುರುಗಾಹಿ ರಾಮಣ್ಣ
ನೆನಹೆ ಲಿಂಗವಾದ ಮತ್ತೆ ಮುಟ್ಟುವುದಕ್ಕೆ ಮಸ್ತಕವಿಲ್ಲ. ಮಾಡುವಾತ ವರ್ಮಜ್ಞನಾದಲ್ಲಿ ಇಕ್ಕಿಹೆ ಕೊಚ್ಚಿಹೆನೆಂಬುದು ನಷ್ಟವಾಯಿತ್ತು. ಅರಿದು ಚರಿಸುವ ವಿರಕ್ತಂಗೆ ತಥ್ಯಮಿಥ್ಯವಳಿದಲ್ಲಿ ಹೊಕ್ಕೆಹೆ ಹೊರಟಿಹೆ ಇದಿರ ಚಿತ್ತವನರಿದೆಹೆನೆಂಬ ಗೊತ್ತುಗೆಟ್ಟಿತ್ತು. ಇಂತೀ ಭೇದಂಗಳ ಭೇದಿಸಿ ವಿಭಾಗಿಸದೆ ವಾಯುವಿನ ಕೈಯ ಗಂಧದಂತೆ ನಾಸಿಕಕ್ಕೆ ವಾಸನೆ ತೋರಿ ಹಿಡಿದೆಹೆನೆಂದಡೆ ಬುಡ ಸಿಕ್ಕದೆ ತ್ರಿವಿಧ ಭಕ್ತಿ ಸನ್ನದ್ಧನಾಗಿಪ್ಪ ಸದ್ಭಕ್ತನ ಶ್ರೀಪಾದವೆ ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಆಲಯ.
--------------
ತುರುಗಾಹಿ ರಾಮಣ್ಣ
ನೀನು ಅಂಗದಲ್ಲಿ ಕಡಿದುದ ಬಿಟ್ಟು ಬಿಟ್ಟು ನೋಡಿ ನಿನ್ನ ಕುರುಹ ಕಾಣೆ. ನೀನು ಕರ್ಣದಲ್ಲಿ ಹೇಳಿದುದ ನೆನೆದು ನೆನೆದು ಮನದಲ್ಲಿ ನಿಲ್ಲೆ. ನೀ ಬಿಡೆಂದುದ ಬಿಟ್ಟೆ, ನೀ ಹಿಡಿಯೆಂದುದ ಹಿಡಿದೆ. ನೀ ಅರಿಯೆಂದುದ ಮುಖಗುರುಹ ಕಾಣೆ. ನಿನ್ನರಿಕೆ ಇನ್ನೆಂದಿಗೆ? ಈ ಘಟವ ಬಿಡುವುದಕ್ಕೆ ಮೊದಲೆ ನಿನ್ನಡಿಯ ಗುಡಿಯ ತೋರು ಗೋಪತಿನಾಥ ವಿಶ್ವೇಶ್ವರಲಿಂಗಾ.
--------------
ತುರುಗಾಹಿ ರಾಮಣ್ಣ