ಅಥವಾ
(3) (0) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (2) (0) (5) (0) (0) (1) (0) (0) (0) (0) (0) (0) (0) (0) (0) (3) (0) (0) (0) (2) (0) (0) (1) (3) (2) (0) (0) (0) (0) (2) (1) (0) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥಾವರದ ಒಡಲಿಗೆ ಕಟ್ಟಿದ ತೊಗಲಿನಂತೆ, ಆರು ಮುಟ್ಟಿದರು ಮುಟ್ಟಿಂಗೊಳಗಾಗಿ ತೋರುತ್ತಿಪ್ಪುದು ದನಿ. ಅದು ಮೂರು ತಂತ್ರದ ಭೇದ. ಆತ್ರಿವಿಧಭೇದವನರಿಯಬಲ್ಲಡೆ, ಅಮರೇಶ್ವರಲಿಂಗವನರಿದುದು.
--------------
ಆಯ್ದಕ್ಕಿ ಮಾರಯ್ಯ
ಸತ್ಯವೆಂಬ ತಟ್ಟೆಯಲ್ಲಿ, ಚಿತ್ತಶುದ್ಧವೆಂಬ ವಿಭೂತಿಯ ಬೈಚಿಟ್ಟು ಸಕಲಸಂಪದ ಪ್ರಮಥರು ಮುಂತಾಗಿ ಅಮರೇಶ್ವರಲಿಂಗದ ಆಶ್ರಯಕ್ಕೆ ಪ್ರಸಾದವ ಕೊಂಬುದಕ್ಕೆ ಬಾ ಬಸವಣ್ಣ.
--------------
ಆಯ್ದಕ್ಕಿ ಮಾರಯ್ಯ
ಸಮಯಕ್ಕೆ ಬಂದೆಹೆನೆಂದು ಕಂದದೆ, ಬಾರೆನೆಂದು ಕುಂದದೆ, ಈ ಉಭಯದ ಸಂದನಳಿದು ನಿಂದಲ್ಲಿ ಅಮರೇಶ್ವರಲಿಂಗವು ತಾನೆ.
--------------
ಆಯ್ದಕ್ಕಿ ಮಾರಯ್ಯ