ಅಥವಾ
(3) (0) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (2) (0) (5) (0) (0) (1) (0) (0) (0) (0) (0) (0) (0) (0) (0) (3) (0) (0) (0) (2) (0) (0) (1) (3) (2) (0) (0) (0) (0) (2) (1) (0) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಲಕ್ಕೆ ಜಲವಲ್ಲದೆ ಅಮಲಕ್ಕೆ ಜಲವುಂಟೆ ? ಅರಿವು ಮಾಡುವ ಭಕ್ತ ಫಲಪದವೆಂಬ ಛಲನೆಗೊಳಗಹನೆ ? ಮಾಡುವ ಮಾಟಂಗಳಲ್ಲಿ ಕಲೆದೋರದಿಪ್ಪುದು, ಅಮರೇಶ್ವರಲಿಂಗವ ಹಿಂಗದ ಭಾವ.
--------------
ಆಯ್ದಕ್ಕಿ ಮಾರಯ್ಯ
ಮನದಲ್ಲಿ ಹುಟ್ಟಿದ ಅರಿವು ಮಾಡುವ ಮಾಟದಲ್ಲಿ ಕಾಣಬಹುದು, ಶರಣರ ಸಂಗಕ್ಕೆಳಸಿದ ಚಿತ್ತವ ಅನುಭಾವದಲ್ಲಿ ಕಾಣಬಹುದು. ಒಳಹೊರಗೆ ತೆರಹಿಲ್ಲದ ಕೂಟ ನಿನ್ನದು. ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
--------------
ಆಯ್ದಕ್ಕಿ ಮಾರಯ್ಯ