ಅಥವಾ
(3) (0) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (2) (0) (5) (0) (0) (1) (0) (0) (0) (0) (0) (0) (0) (0) (0) (3) (0) (0) (0) (2) (0) (0) (1) (3) (2) (0) (0) (0) (0) (2) (1) (0) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು, ಲಿಂಗಪೂಜೆಯ ಮಾಡುವಲ್ಲಿ ಲಿಂಗಪೂಜೆಯಲ್ಲಿಯೇ ಮುಕ್ತರು, ಜಂಗಮಪೂಜೆಯ ಮಾಡುವಲ್ಲಿ ಜಂಗಮಪೂಜೆಯಲ್ಲಿಯೇ ಮುಕ್ತರು. ಮೂರೊಂದಾಗಲಾಗಿ ಬೇರೊಂದಂಗವಿಲ್ಲ. ಆಗುಚೇಗೆ ಮೂರರಲ್ಲಿ ಅಡಗಿದ ಮತ್ತೆ ಅಮರೇಶ್ವರಲಿಂಗವ ಪೂಜಿಸಲಿಲ್ಲ.
--------------
ಆಯ್ದಕ್ಕಿ ಮಾರಯ್ಯ
ಗೆಜ್ಜಲು ಮನೆಯ ಮಾಡಿ ಸರ್ಪಂಗಿಂಬಾದಂತೆ ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ ನ್ನನಗಿನ್ನೆತ್ತಣ ಮುಕ್ತಿ ಅಮರೇಶ್ವರಲಿಂಗ !
--------------
ಆಯ್ದಕ್ಕಿ ಮಾರಯ್ಯ
ಗುರುಲಿಂಗಜಂಗಮದಲ್ಲಿ ಬೆರಸಿ ದಾಸೋಹವ ಮಾಡುವಲ್ಲಿ, ಹೆಣ್ಣು ಹೊನ್ನು ಮಣ್ಣು ಇವೇ ಮೂಲ ಮೊದಲು. ಮಾಟ ಸ್ವಸ್ಥವಾದಲ್ಲಿ ಈ ಮೂರ ಮರೆಯಬೇಕು, ಅಮರೇಶ್ವರಲಿಂಗವನರಿಯಬೇಕು.
--------------
ಆಯ್ದಕ್ಕಿ ಮಾರಯ್ಯ
ಗಣಸಮೂಹವೆಂದು ಕೂಡಿ ಮಾಡುವಲ್ಲಿ ಸಮಯದ ನೋವು ಭೂರಿಗೀಡಾಗಿ, ಮಾಟದ ಸಂದೇಹವ ಹೊತ್ತು ಮಾತಿಂಗೊಳಗಾದಲ್ಲಿ, ಭಕ್ತಿಯ ನೀತಿ ಸಿಕ್ಕಿತ್ತು, ಅಮರೇಶ್ವರಲಿಂಗಕ್ಕೆ ದೂರವಾಯಿತ್ತು.
--------------
ಆಯ್ದಕ್ಕಿ ಮಾರಯ್ಯ
ಗಂಗೆವಾಳುಕ ಸಮಾರುದ್ರರೆಲ್ಲರು ತಾವು ತಾವು ಬಂದಲ್ಲಿಯೆ ಬಟ್ಟೆಯ ಮೆಟ್ಟಿದಂತಾದರು. ಪ್ರಮಥಗಣಂಗಳೆಲ್ಲರು ಪ್ರಮಾಣಿಸಿದಲ್ಲಿ ಹರಿದರು, ಎನಗೆ ಕರಿಗೊಂಬ ಅರಿವೆಲ್ಲಿ ಅಮರೇಶ್ವರಲಿಂಗಾ ?
--------------
ಆಯ್ದಕ್ಕಿ ಮಾರಯ್ಯ