ಅಥವಾ
(3) (0) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (2) (0) (5) (0) (0) (1) (0) (0) (0) (0) (0) (0) (0) (0) (0) (3) (0) (0) (0) (2) (0) (0) (1) (3) (2) (0) (0) (0) (0) (2) (1) (0) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತರ ಭಾವದಲ್ಲಿ ಸುಳಿವ ಸುಳುಹು, ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು, ನೀನೆಯಯ್ಯಾ ! ಸೂರ್ಯನ ಬೆಳಗಿನೊಳಗೆ ಸಚರಾಚರಪ್ರಾಣಿಗಳು ಸುಳಿವಂತೆ, ನಮ್ಮ ಕಟ್ಟಿನ ನೇಮದ ನಿಷೆ* ನೀನೆಯಯ್ಯಾ. ಅಮರೇಶ್ವರಲಿಂಗದ ಒಡಲು ಸಂಗನಬಸವಣ್ಣನೆಂಬುದನು ಮಡಿವಾಳಮಾಚಿತಂದೆಗಳೆ ಬಲ್ಲರು ಕಾಣಾ ಸಂಗನಬಸವಣ್ಣ.
--------------
ಆಯ್ದಕ್ಕಿ ಮಾರಯ್ಯ
ಭಕ್ತಂಗೆ ಆಗುಚೇಗೆ ಅಹಂಕಾರಕ್ಕೊಳಗಾದಲ್ಲಿಯೆ ಸತ್ಯ ಸದಾಚಾರ ಸಿಕ್ಕಿತ್ತು. ಅಹಂಕಾರವ ಮರೆದು, ನಿಹಿತಾಚಾರವನರಿದು, ಅಮರೇಶ್ವರಲಿಂಗವ ಅವಗವಿಸಬೇಕು.
--------------
ಆಯ್ದಕ್ಕಿ ಮಾರಯ್ಯ
ಭಕ್ತರಿಗೆ ಬಡತನವುಂಟೆ ? ಸತ್ಯರಿಗೆ ಕರ್ಮವುಂಟೆ ? ಚಿತ್ತ ಮುಟ್ಟಿ ಸೇವೆಯ ಮಾಡುವ ಭಕ್ತಂಗೆ ಮತ್ರ್ಯ ಕೈಲಾಸವೆಂಬುದುಂಟೆ ? ಆತನಿದ್ದುದೆ ಸುಕ್ಷೇತ್ರ, ಆತನಂಗವೆ ಅಮರೇಶ್ವರಲಿಂಗದ ಸಂಗಸುಖ.
--------------
ಆಯ್ದಕ್ಕಿ ಮಾರಯ್ಯ