ಅಥವಾ
(3) (0) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (2) (0) (5) (0) (0) (1) (0) (0) (0) (0) (0) (0) (0) (0) (0) (3) (0) (0) (0) (2) (0) (0) (1) (3) (2) (0) (0) (0) (0) (2) (1) (0) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತವನಿದ್ಥಿಯ ಬೆಳೆವಂಗೆ ಕಣಜದ ಹಂಗುಂಟೆ ? ವಿರಕ್ತಂಗೆ ಆರೈಕೆಗೊಂಬವರುಂಟೆ ? ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
--------------
ಆಯ್ದಕ್ಕಿ ಮಾರಯ್ಯ
ತೊಟ್ಟುಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು, ಮತ್ರ್ಯದ ಹಂಗುಳ್ಳನ್ನಕ್ಕ ಸತ್ಯಶರಣರ ಸಂಗ, ನಿತ್ಯಜಂಗಮಸೇವೆ ಕೃತ್ಯವಿರಬೇಕು ಅಮರೇಶ್ವರಲಿಂಗವನರಿವುದಕ್ಕೆ.
--------------
ಆಯ್ದಕ್ಕಿ ಮಾರಯ್ಯ
ತನುವೀವಡೆ ತನುವೆನಗಿಲ್ಲ, ಮನವೀವಡೆ ಮನವೆನಗಿಲ್ಲ, ಧನವೀವಡೆ ಧನವೆನಗಿಲ್ಲ. ಇಂತೀ ತನುಮನಧನ ಸಕಲಸಂಪತ್ತುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದುತಂದು ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ.
--------------
ಆಯ್ದಕ್ಕಿ ಮಾರಯ್ಯ