ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ ಸ್ಥಾನಂಗಳಲ್ಲಿ ಧರಿಸಿ, ಶಿವಾರ್ಚನೆಯ ಮಾಡುವುದು ಸದಾಚಾರ, ಅದೇ ಸದ್ಯೋನ್ಮುಕ್ತಿ. ಅದು ಕಾರಣ, ಆ ಮಹಾರುದ್ರಾಕ್ಷಿಯ ಧರಿಸಿ, ಎನ್ನ ಭವಂ ನಾಸ್ತಿಯಾತಿತ್ತು. ಮಹಾಲಿಂಗ ಕಲ್ಲೇಶ್ವರಾ, ರುದ್ರಾಕ್ಷಿಯಿಂದೆ ಕೃತಾರ್ಥನಾದೆನು.
--------------
ಹಾವಿನಹಾಳ ಕಲ್ಲಯ್ಯ
ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ ಒಲವರದಿಂದ ಹೋಹಲ್ಲಿ, ಆ ದೈವದ ಬಲುಮೆಯ ಅವನ ಕುಲವಾಸಾ ಬಲುಮೆಯ ತೆರನೊ! ಈ ಹೊಲಬ ತಿಳಿದು, ಗುರು ಚರವಪ್ಪ ವಸ್ತುಸಂಸಾರದ ಒಡಲೆಳೆಗಾಗಿ, ಭಕ್ತನ ನೆಲೆಹೊಲವಾಸಕ್ಕೆ ಹಲುಬಿ ಬರಬಹುದು ? ಇದು ವಸ್ತುವಿನ ನೆಲೆಯಿಲ್ಲ. ಕರ್ತೃ ಸಂಬಂಧಕ್ಕೆ ಸಲ್ಲ, ಮಹಾಮಹಿಮ ಕಲ್ಲೇಶ್ವರಲಿಂಗ ಅವರುವನೊಲ್ಲ.
--------------
ಹಾವಿನಹಾಳ ಕಲ್ಲಯ್ಯ
ಶುಚಿಗಳು ಶುದ್ಧಾತ್ಮರೆಂಬರು ನಾವಿದನರಿಯೆವಯ್ಯಾ. ಕಾಯವಿಡಿದು ಶುಚಿ ಶುದ್ಧಾತ್ಮನೊ ? ಜೀವವಿಡಿದು[ಶುಚಿ] ಶುದ್ಧಾತ್ಮನೊ ? ಅವುದವಿಡಿದು ಶುಚಿ ಶುದ್ಧಾತ್ಮನು ಹೇಳಿರೆ ! ಕಾಯದ ಮಲವ ತೊಳೆದು ಶುದ್ಧವ ಮಾಡಬಲ್ಲಡೆ, ಕಾಯ ಸಕಾಯ ನೋಡಿರೆ ! ಜೀವನ ಮಲವ ಕಳೆದು ಜೀವನ ಶುದ್ಧವ ಮಾಡಬಲ್ಲಡೆ, ಜೀವನ ಶುದ್ಧಾತ್ಮನು ಕೇಳಿರೆ ! ಅಂತರಂಗಕ್ಕೆ ಭಾವ ಮನ ನಿರ್ಮಲ ಶುದ್ಧಿ. ಬಹಿರಂಗಕ್ಕೆ ತನು ಕರಣುಂಗಳಳಿದುದೆ ಶುದ್ಧಿ ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರು ಒಳಗೂ ಹೊರಗೂ ಸರ್ವಾಂಗಲಿಂಗವಾಗಿ, ಸರ್ವಶುಚಿ ಶುದ್ಧಾತ್ಮರು ಕೇಳಿರೆ !
--------------
ಹಾವಿನಹಾಳ ಕಲ್ಲಯ್ಯ
ಶರಣಸಂಬಂಧವನರಿದ ಬಳಿಕ, ಕುಲಮದ ಛಲಮದವಿಲ್ಲ ಕಂಡಯ್ಯಾ. ಲಿಂಗಸಂಬಂಧವನರಿದ ಬಳಿಕ, ಶೀಲಸಂಬಂಧವಿಲ್ಲ ಕಂಡಯ್ಯಾ. ಪ್ರಸಾದಸಂಬಂಧವನರಿದ ಬಳಿಕ, ಇಹಪರಂಗಳೆಂಬವಿಲ್ಲ ಕಂಡಯ್ಯಾ. ಮಹಲಿಂಗ ಕಲ್ಲೇಶ್ವರಾ, ಇಂತೀ ತ್ರಿವಿಧ ಸಂಬಂಧಕ್ಕೆ ಇದೇ ದೃಷ್ಟ.
--------------
ಹಾವಿನಹಾಳ ಕಲ್ಲಯ್ಯ
ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ, ಲಿಂಗಕ್ಕೆ ಅರ್ಚನೆ ಪೂಜೆಗಳನು ಮಾಡಿ, ಲಿಂಗಾರ್ಪಿತದಲ್ಲಿ ಅವಧಾನಪ್ರಸಾದ, ಭೋಗದಲ್ಲಿ ಸುಯಿಧಾನ, ಗುರುವಿನಲ್ಲಿ ಜ್ಞಾನಸಿದ್ಧಿ, ಜಂಗಮದಲ್ಲಿ ನಿರ್ವಂಚನೆ, ಪ್ರೀತಿ ಪ್ರೇಮ ಪರಧನ ಪರಸ್ತ್ರೀ ಪರದೈವಕ್ಕೆರಗದೆ, ನಿತ್ಯಲಿಂಗಾರ್ಚನೆಯು ಮಾಡೆಂದು ಉಪದೇಶಮಂ ಕೊಟ್ಟನಲ್ಲದೆ, ಪಾದತೀರ್ಥದಲ್ಲಿ ಲಿಂಗಮಜ್ಜನಕ್ಕೆರೆದು ಪ್ರಸಾದವನರ್ಪಿಸ ಹೇಳಿಕೊಟ್ಟನೆ, ಇಲ್ಲ. ಆ ಭಕ್ತನು ತನು ಮನ ಧನವನು ಗುರುಲಿಂಗಜಂಗಮಕ್ಕೆ ಸವೆಸಿ, ತನು ಸವೆಸಿ ಮನಲೀಯವಾಗಿ ಧನಲೋಭವಿಲ್ಲದೆ ಸಂದು ನಿಂದ, ಪರಮವೈರಾಗ್ಯ ಉರವಣಿಸಿ ಈಷಣತ್ರಯದ ಆಸೆಯಳಿದು, ಸೋಹಂ ಎಂದು ನಿಂದು ಹರಗಣಂಗಳಂ ನೆರಪಿ, ಆಚಾರ ಕರ್ಪರ, ವಿಚಾರ ಕರ್ಪರ, ಅವಿಚಾರ ಕರ್ಪರ ವೇಷಮಂ ತಾಳಿ, ಭಕ್ತ ಭಿಕ್ಷಾಂದೇಹಿ ಎಂದು ಭಕ್ತರ ಮಠದಲ್ಲಿ ಹೊಕ್ಕು, ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದಮಂ ಭೋಗಿಸಿ, ಶಿವಕ್ಷೇತ್ರ ತೀರ್ಥಂಗಳಂ ಚರಿಸಿ, ಲಿಂಗಧ್ಯಾನ ನಿರತನಾಗಿ ಇರಹೇಳಿದರಲ್ಲದೆ, ಲಿಂಗಕ್ಕೆ ಪಾದತೀರ್ಥವ ಕೊಟ್ಟು, ಪ್ರಸಾದವನಿಕ್ಕ ಹೇಳೆ ಮಾಡಿದ ನಿರ್ವಾಣದೀಕ್ಷೆಯುಂಟೆ ? ಸಲಿಂಗೀ ಪ್ರಾಣಮುಕ್ತಶ್ಚ ಮನೋಮುಕ್ತಶ್ಚ ಜಂಗಮಃ | ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿರ್ಣಯಃ || ಇಂತೆಂದುದಾಗಿ, ಈ ನಿರ್ಣಯ ವಚನವನರಿಯಬಲ್ಲಡೆ ಜಂಗಮ, ಅಲ್ಲದಿದ್ದಡೆ ಭವಭಾರಿಯೆಂಬೆ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಶಿವ ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ ತೋರನೆಂಬುದು ವೇದ. ಆ ಸದ್ಭಕ್ತನೆ ಬ್ರಾಹ್ಮಣ, ಆ ಸದ್ಭಕ್ತನೆ ಸತ್ಕುಲಜ, ಆ ಸದ್ಭಕ್ತನೆ ಎನಗಿಂದಧಿಕನೆಂದು ಶ್ರೀರುದ್ರವೇದ ಬೊಬ್ಬಿಡುತ್ತಿದೆ. ಯಾತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ | ತಯಾನಸ್ತನುವಾ ಶಂತಮಯಾ ಗಿರೀಶಂ ತಾಭಿ ಚಾಕಶೀಃ || ಎಂದುದಾಗಿ, ಶಿವಲಿಂಗಭಕ್ತನಲ್ಲದೆ ಅತಃಪರವೊಂದು ಇಲ್ಲ ಕೇಳಿಭೋ. ನಿಮ್ಮ ಮನದೊಳಗೆ ಯಜುರ್ವೇದ ಶ್ರುತಿಯ ವಿಚಾರಿಸಿ ನೋಡಿರಣ್ಣಾ. ಓಂ ಸಪದಸ್ತ್ರೈದ್ರ್ಯಾವಾ ಭೂಮೀ ಜನಯನ್ ದೇವಃ ಎಂದುದಾಗಿ, ಶೈವಪುರಾಣೇ : ಯಥಾ ಪಂಕೇ ಸರೋಜಂ ಚ ಯಥಾ ಕಾಷೆ*ೀ ಹುತಾಶನಃ | ಸುಪ್ರತಿಷಿ* ತಲಿಂಗೇ ತು ನಯಥಾ ಪೂರ್ವಭಾವನಂ || ಮತ್ತಂ ಲೈಂಗೇ: ಶಿವದೀಕ್ಷಾಭಿಜಾತಸ್ಯ ಪೂರ್ವಜಾತಿಂ ನ ಚಿಂತಯೇತ್ | ಯಥಾ ಸುವರ್ಣಪಾಷಾಣೇ ಭಕಶ್ಚಂಡಾಲವಂಶಜಃ || ಇಂತೆಂದು ಪುರಾಣವಾಕ್ಯಂಗಳು ಸಾರುತ್ತಿವೆ. ಶಿಲಿಂಗಬಕ್ತನೇ ಶ್ರೇಷ*ನು. ಶ್ವಪಚನಾದಡೆಯೂ ಆ ಲಿಂಗಭಕ್ತನೇ ಕುಲಜನು, ಆ ಲಿಂಗಭಕ್ನೇ ಉತ್ತಮನಯ್ಯ, ಮಹಾಲಿಂಗಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ, ಹಸ್ತಮಸ್ತಕಸಂಯೋಗಕಾಲದಲ್ಲಿ, ಪಂಚಕಳಶದ ನಿರ್ಮಲಜಲವ ತನ್ನ ಕರುಣಜಲವ ಮಾಡಿ, ಆತನ ಜನ್ಮದ ಮೇಲಿಗೆಯ ಕಳೆಯಲು, ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ, ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ. ಲಿಂಗಸ್ಪರುಶನದಿಂದ ಪಾದೋದಕವನರಿದೆ. ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ. ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ