ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಕರುಣಾಮೃತವಿಲ್ಲದ ಭಕ್ತಿಯ ಅನು, ಮನದಲನುಕರಿಸುವ ಜೀವಿಗಿನ್ನೆಲ್ಲಿಯದೊ ? ಸತ್ಕ್ರಿಯೆ ಸತ್ಪಥವಿನ್ನೆಲ್ಲಿಯದೊ ? ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವ ಲಿಂಗ ಜಂಗಮ ಕರುಣವಿಲ್ಲದ ಜಡಮತಿಗಿನ್ನೆಲ್ಲಿಯದೊ ?
--------------
ಹಾವಿನಹಾಳ ಕಲ್ಲಯ್ಯ
ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು, ಅಹಂಕಾರವಳಿದಿಹಂಥ ಪ್ರಮಥಗಣಂಗಳು, ಇಂದೆನ್ನ ಮನೆಗೆ ಬಂದಾರೆಂದು, ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ, ರಂಗವಾಲಿಯನಿಕ್ಕಿ, ಉಘೇ ಚಾಂಗುಭಲಾ ಎಂದುಗ್ಗಡಿಸುವೆನು, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಪುರಾತನರು ತಮ್ಮೊಕ್ಕುದನಿಕ್ಕಿ ಸಲಹುವರಾಗಿ.
--------------
ಹಾವಿನಹಾಳ ಕಲ್ಲಯ್ಯ
ಗುರುವಿದೆ, ಲಿಂಗವಿದೆ, ಜಂಗಮವಿದೆ, ಪಾದತೀರ್ಥಪ್ರಸಾದವಿದೆ. ಮತ್ತೆಯೂ ಬಳಲುತ್ತಿದ್ದೇನೆ, ಭಕ್ತಿ ಸಹಜವಳಡದಾಗಿ. ಇದರ ಸಂದುಸಕೀಲವನರಿಯದೆ ಮತ್ತೆಯೂ ಬಳಲುತ್ತಿದ್ದೇನೆ, ಮಹಾಲಿಂಗ ಕಲ್ಲೇಶ್ವರಯ್ಯಾ, ಸಹಜ ಸದ್ಭಾವ ಸತ್ಯಶರಣರ ಮಹಾನುಭಾವರ ಸಂಗವಲ್ಲಾಗಿ.
--------------
ಹಾವಿನಹಾಳ ಕಲ್ಲಯ್ಯ
ಗುರು ಕರುಣ,. ಚರಣ ಸೇವೆ, ಭವದ ಬಳ್ಳಿಯ ಬೀಜವನತಿಗಳೆಯಿತ್ತು, ನೋಡ ನೋಡಲುದಯಿಸಿತ್ತು, ಘನಪದದ ತೋರಿತ್ತು, ನಿರಾಕುಳ ನಿರುಹರಣ ಮಹಾಲಿಂಗ ಕಲ್ಲೇಶ್ವರದೇವಾ.
--------------
ಹಾವಿನಹಾಳ ಕಲ್ಲಯ್ಯ