ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾರೆ, ಏತಕ್ಕಯ್ಯ ? ನಿಮ್ಮ ಬರವ ಹಾರುತ್ತಿರ್ದೆನು. ಸಾರೆ, ಏತಕ್ಕಯ್ಯ ? ನಿಮ್ಮ ಸರವ ಹಾರುತ್ತಿರ್ದೆನು. ತೋರೆ, ಏತಕ್ಕಯ್ಯ ? ನಿಮ್ಮ ಲಿಂಗರೂಪು, ನಿಜಜ್ಞಾನವ. ಪೂಜೆಗೊಂಬಾಗಲಲ್ಲದೆ ಎನ್ನ ಮನಕ್ಕೆ ಬರಲಾಗದೆ, ಮಹಾಲಿಂಗ ಕಲ್ಲೇಶ್ವರಾ ?
--------------
ಹಾವಿನಹಾಳ ಕಲ್ಲಯ್ಯ
ಬಾಲಕಿ ಹಾಲ ಸವಿದಂತೆ, ಮರುಳಿನ ಮನದ ನೆನಹಿನಂತೆ, ಮೂಗ ಕಂಡ ಕನಸಿನಂತೆ, ಮೈಯರಿಯದ ನೆಳಲಿನಂತೆ, ಬಂಜೆಯ ಮನದ ಸ್ನೇಹದಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು.
--------------
ಹಾವಿನಹಾಳ ಕಲ್ಲಯ್ಯ
ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ, ಎಲ್ಲಿರಿಗೆಯೂ ಜನನವೊಂದೆ. ಆಹಾರ ನಿದ್ರೆ ಭಯ ಮೈಥುನವೊಂದೆ, ಪುಣ್ಯಪಾಪವೊಂದೆ, ಸ್ವರ್ಗವೊಂದೆ. ಬೇರೆಂಬ ಭಂಗಿತರು ನೀವು ಕೇಳಿರೆ ! ಅರಿವೇ ಸತ್ಕುಲ, ಮರವೇ ದುಃಕುಲ, ಅರಿವುವಿಡಿದು ಮನಪಕ್ಷ. ಆಗಮವಿಡಿದು ಆಚಾರ, ಆಚಾರವಿಡಿದು ಸಮಯ. ಅರಿದಡೆ ಶರಣ, ಮರೆದಡೆ ಮಾನವ. ವಿಚಾರಿಸಿದಡೆ ಸಚರಾಚರವೆಲ್ಲವೂ ಪಂಚಭೂತಮಯ. ಚಂದಿರಾದಿಗಳೊಳಗೊಂದು ಮನುಷ್ಯಜನ್ಮ. ಸಪ್ತಧಾತು ಸಮಂಪಿಂಡಂ ಸಮಯೋನಿ ಸಮುದ್ಭುವಂ | ಆತ್ಮಾ ಜೀವನಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ. ನಿಮ್ಮ ಶರಣರು ಅಜಾತಚರಿತ್ರರಾಗಿ, ಆವ ಜಾತಿಯನೂ ಹೊದ್ದರು.
--------------
ಹಾವಿನಹಾಳ ಕಲ್ಲಯ್ಯ
ಬಯಲು ಮೊಳಗಿ, ಮಳೆ ಸೃಜಿಸೆ, ಆ ಬಯಲು ಆ ಮಳೆಯನೊಡಗೂಡಿ, ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ, ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ. ಆ ನಿಮ್ಮಿಬ್ಬರ ಸಮರತಿಯೆ, ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಆದಿಗೆ, ಇದೇ ಪ್ರಥಮವಾಯಿತ್ತಲ್ಲಾ.
--------------
ಹಾವಿನಹಾಳ ಕಲ್ಲಯ್ಯ
ಬಯಲಬೊಮ್ಮವ ನುಡಿವ, ಆ ನುಡಿಯ ಬಯಲಭ್ರಮೆಯಲ್ಲಿ ಬಿದ್ದ ಜಡರುಗಳು ಬಲ್ಲರೆ, ಶಿವನಡಿಗಳ ? ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ ಪರವು ಸಾಧ್ಯವಾಗದು, ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ.
--------------
ಹಾವಿನಹಾಳ ಕಲ್ಲಯ್ಯ
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು. ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು. ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು, ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ, ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು. ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು. ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು. ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು ನಾಯನಡೆಯಲ್ಲಿ ನಡೆವರು. ಅವರು ಅನುಭಾವಿಗಳಪ್ಪರೇ ? ಅಲ್ಲಲ್ಲ. ಆದೆಂತೆಂದಡೆ : ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ ? ಅನ್ನವೆ ಜ್ಞಾನವಾಗಿಹರೆ ? ವರುಣನ ಹೊದಿಕೆಯನೆ ಹೊದೆದು, ಚಂದ್ರಮನ ತೆರೆಯಲೊರಗಿ, ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ ? ಇಂತವರಲ್ಲಯ್ಯ ನಮ್ಮ ಶರಣರುಗಳು. ಇವರುಗಳು ಪಾತಕಿಗಳು, ಆಸೆಯ ಸಮುದ್ರರು, ಅಂಗಶೃಂಗಾರಿಗಳು, ಭವಭಾರಿ ಜೀವಿಗಳು. ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ ? ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು, ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ.
--------------
ಹಾವಿನಹಾಳ ಕಲ್ಲಯ್ಯ