ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಮ್ಮ ನೆನವ ಮನಕ್ಕೆ ಜ್ಞಾನಸಿದ್ಧಿಯೆಂತಪ್ಪುದೆಂದರಿಯೆನಯ್ಯಾ. ಕರ್ಮದೊಳಗಣ ಬಯಲಮೋಹವೆನ್ನ ಬೆನ್ನ ಬಿಡದು. ಅನ್ಯವಿಷಯ ಭಿನ್ನ ರುಚಿಯಲೆನ್ನ ಮನವು ಹರಿವುದ ಮಾಣದನ್ನಕ್ಕರ, ನಿಮ್ಮ ನೆನೆದೆಹೆನೆಂಬ ಮನದ ಕಲಿತನವ ನೋಡಾ, ಮಹಾಲಿಂಗ ಕಲ್ಲೇಶ್ವರಾ !
--------------
ಹಾವಿನಹಾಳ ಕಲ್ಲಯ್ಯ
ನಡೆವಲ್ಲಿ ಕಾಣದೆ ಎಡಹಿ, ಅರಿಕೆಯಲ್ಲಿ ಅರಿದ ಮತ್ತೆ ನಡೆವಾಗ ಎಚ್ಚರಿಕೆ. ಕಾಲಹುಣ್ಣು ಕತಿಕಿರಿವ ತೆರೆದಂತೆ, ಮರವೆಯಿಂದ ಶರಣರಲ್ಲಿ ಬಿರುಬಿನ ಮಾತು ಬಂದಡೆ, ಅದ ಒಡನೆ ತಿಳಿಯಬೇಕು. ಅದು ಶರೀರದ ಪ್ರಕೃತಿ ಸಂಚಾರವೆಂದರಿತು, ಬಿಡುವ ಗುಣವ ಬಿಟ್ಟು ಅರಿದಡೆ, ಭಕ್ತಿಗದೇ ಗುಣ. ಬಟ್ಟೆಯಲ್ಲಿ ಭಯವೆಂದಡೆ ಎಚ್ಚರಿಕೆ ಬೇಕು. ಮತ್ತೆ ಮರವೆಯ ಶರೀರಕ್ಕೆ ಅದು ಲಕ್ಷಣ. ಮತ್ತೆ ಎಚ್ಚರಿಕೆ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ನಿಃಕಲ ಪರತತ್ವವ ಮಹಾಲಿಂಗಕ್ಷೇತ್ರ. ಆ ಕ್ಷೇತ್ರದಲ್ಲಿ ನಿಕ್ಷೇಪವಾಗಿ ನಿಧಾನಿಸಿದ್ದ ಘನಚೈತನ್ಯವೆ ಷಟ್‍ಸ್ಥಲಲಿಂಗ ಮೂಲಾಂಕುರವೆನಿಸುವ ಪರಮಕಳೆ. ಆ ಪರಮಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ, ಪರಮಾತ್ಮ ಪರಮಜ್ಞಾನ ಪರಮಚೈತನ್ಯ ನಿಃಕಲ ಚರವೆನಿಸುವ ಪರವಸ್ತು. ಶ್ರುತಿ : ವರ್ಣಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ | ಜ್ಞಾನಾತೀತಂ ನಿರಂಜನ್ಯಂ ತತ್ಕಲಾ ಸೂಕ್ಷ್ಮಭಾವತಃ || ಇಂತೆಂದುದಾಗಿ, ಇಂತೀ ನಿರವಯ ಚರಲಿಂಗದ ಚೈತನ್ಯವೆಂಬ ಪ್ರಸನ್ನ ಪ್ರಸಾದಮಂ ಇಷ್ಟಲಿಂಗಕ್ಕೆ ಕಲಾಸಾನಿಧ್ಯವಂ ಮಾಡಿ, ಆ ಚರಲಿಂಗದ ಸಾಮರಸ್ಯ ಚರಣಾಂಬುವಿಂ ಮಜ್ಜನಕ್ಕೆರೆದು, ನಿಜಲಿಂಗೈಕ್ಯವನೆಯ್ದಲರಿಯದೆ ಕಂಡವರ ಕಂಡು, ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಡವರ ತೆರನಾದ ಭಂಡರ ಮೆಚ್ಚವನೆ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ?
--------------
ಹಾವಿನಹಾಳ ಕಲ್ಲಯ್ಯ