ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು, ಆ ಜಂಗಮದ ಪ್ರಸಾದವನೆ ಲಿಂಗಕ್ಕರ್ಪಿಸುವ ಅವಿವೇಕಿಗಳು ನೀವು ಕೇಳಿರೆ ! ಅಟ್ಟೋಗರವನಟ್ಟೆನೆಂಬ, ಕಾಷ*ವ ಸುಟ್ಟ ಬೂದಿಯ ಮರಳಿ ಸುಟ್ಟೆಹೆನೆಂಬ ಭ್ರಮಿತರು ನೀವು ಕೇಳಿರೆ ! ಪದಾರ್ಥ ಪ್ರಸಾದವಾದುದು ಇಷ್ಟಲಿಂಗ ಮುಖದಿಂದ. ಆ ಇಷ್ಟಲಿಂಗವ ಸೋಂಕಿ ಬಂದ ಆದಿಪ್ರಸಾದವೆ ಪ್ರಾಣಲಿಂಗಕ್ಕೆ ಅಂತ್ಯಪ್ರಸಾದ. ಆ ಪ್ರಾಣಲಿಂಗಮುಖದಿಂದಲೊದಗಿದ ಅಂತ್ಯಪ್ರಸಾದವೆ ಭಾವಲಿಂಗಕ್ಕೆ ತೃಪ್ತಿಮುಖದಲ್ಲಿ ಸೇವ್ಯ ಪ್ರಸಾದ. ಇಂತೀ ಆದಿಪ್ರಸಾದ, ಅಂತ್ಯಪ್ರಸಾದ, ಸೇವ್ಯಪ್ರಸಾದ ಗ್ರಾಹಕವೆಂಬ ಜಂಗಮ ಇಷ್ಟಲಿಂಗವಿಡಿದು ಗುರು, ಇಷ್ಟಲಿಂಗವಿಡಿದು ಭಕ್ತ, ಇಷ್ಟಲಿಂಗವಿಡಿದು ಜಂಗಮ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಪ್ರಸನ್ನ ಪ್ರಸಾದವ ಪಡೆದು, ಅಷ್ಟಭೋಗವ ಭೋಗಿಸುವಾತನೆ ಗುರು. ಇಂತೀ ಆದಿಕುಳ ಮಹಾನಂದ ಪ್ರಸಾದದ ನಿಜಾನುಭಾವಿಯೆ ಜಂಗಮ. ಇಂತೀ ಗುರು ಲಿಂಗ ಜಂಗಮದಲ್ಲಿ ಭಕ್ತಿ ನೆಲೆಗೊಂಡ ನಿರುಪಾಧಿಕನೆ ಭಕ್ತ. ಆ ಭಕ್ತನು ಲಿಂಗಮುಖದಲ್ಲಿ ಸಿದ್ಧಪ್ರಸಾದವ ಪಡೆದು ಭೋಗಿಸೂದು. ಸ್ವಚ್ಛಂದ ಲಲಿತ ಭೈರವಿಯಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾತ್ ಜಂಗಮಾದಿಷು | ಜಂಗಮಸ್ಯ ಪ್ರಸಾದಂ ಚ ನ ದದ್ಯಾ ಲಿಂಗಮೂರ್ತಿಷು | ಜಂಗನಸ್ಯ ಪ್ರಸಾದಂ ಚ ಸ್ವೇಷ್ಟಲಿಂಗೇನ ಚಾರ್ಪಯೇೀತ್ | ಪ್ರಮಾದಾದರ್ಪಯೇದ್ದೇವಿ ಪ್ರಸಾದೋ ನಿಷ್ಫಲೋ ಭವೇತ್ || ಇಂತೆಂದುದಾಗಿ, ಅಂದಾದಿಯಿಂದಾದಿಯಾಗಿ ಎಂದೆಂದೂ ಇದೇ ಪ್ರಸಾದದಾದಿಕುಳ. ಈ ಆದಿಕುಳದರಿವುವಿಡಿದು ಪ್ರಸಾದವಿಡಿವ ಮಹಾಪ್ರಸಾದ ಸಾಧ್ಯಗ್ರಾಹಕರಿಗೆ ನಮೋ ನಮೋ ಎಂಬೆ. ಉಳಿದ ಉದ್ದೇಶಿಗಳೆನಿಸುವ ಭ್ರಾಂತರಹ ಜಾತ್ಯಂಧಕರಿಗೆ ನಾನಂಜುವೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ ತಾಗುನಿರೋಧ ಕೊರೆತ ನೆರೆತಗಳ ಹಿಡಿವನೆ ಶಿವಶರಣನು ? ಹಿಡಿಯನು. ಅದೇನು ಕಾರಣವೆಂದೆಡೆ, ಅದೆ[ಲ್ಲವೂ] ನಿನ್ನ ಮಾಯೆಯೆಂಬುದನು ಬಲ್ಲನಾಗಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ, ನಿಮ್ಮ ಶರಣರು ನಿಜಗಲಿಗಳು.
--------------
ಹಾವಿನಹಾಳ ಕಲ್ಲಯ್ಯ
ಜಾತಿಯಲ್ಲಿ ಅಧಿಕವೆಂದು ನುಡಿವರು ವಿಪ್ರಜನರು. ಶ್ವಪಚ ಮಚ್ಚಿಗ ಬೋಯ ಕುಲಜರೆ ದ್ವಿಜರು ? ಅಗಸ ಕಮ್ಮಾರ ನಾವಿದ ಕುಲಜರೆ ದ್ವಿಜರು ? ಸರ್ವವೇದೇಷು ಶಾಸ್ತ್ರೇಷು ಸರ್ವಯಜ್ಞೇಷು ದೀಕ್ಷಿತಃ | ಮಹಾಪಾತಕಕೋಟಿಘ್ನಃ ಶ್ವಪಚೋ ಲಿಂಗಪೂಜಕಃ | ತತ್ಸಂಭಾಷಣತೋ ಮುಕ್ತಿಃ ಗಣಮುಖ್ಯಂ ಸುಖಂ ಭವೇತ್ || ಇಂತೆಂದುದಾಗಿ, ಲಿಂಗಭಕ್ತನೆ ಕುಲಜನು. ಮಹಾಲಿಂಗ ಕಲ್ಲೇಶ್ವರನನಾರಾಧಿಸಿ ಪಡೆದರೆಲವೊ. ಮರೆದಡೆ ಹುಳುಗೊಂಡದಲ್ಲಿಪ್ಪಿರೆಲವೊ
--------------
ಹಾವಿನಹಾಳ ಕಲ್ಲಯ್ಯ