ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ ? ಅಲ್ಲ. ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ ? ಅಲ್ಲ. ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ ? ಅಲ್ಲ. ಶೀಲ, ಮೀಸಲು, ಭಾಷೆ ಲಿಂಗದೊಡಲು, ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು.
--------------
ಹಾವಿನಹಾಳ ಕಲ್ಲಯ್ಯ
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ? ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ, ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ? ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ | ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು, ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
--------------
ಹಾವಿನಹಾಳ ಕಲ್ಲಯ್ಯ
ಮುನಿಸ ಮುನಿಸದಡೆ ಶ್ರೀಗಂಧದ ಮರುಡಿನಂತಿರಬೇಕವ್ವಾ. ತೇದಡೆ ತೆಗೆದಡೆ ಚಂದನದ ಶೀತಲದ ಹಾಗೆಯಾಗಿರಬೇಕಪ್ಪಾ. ಹೆಣಗುವಲ್ಲಿ ಕೈಹಿಡಿದು ಹೆಣಗುತ್ತಿರಬೇಕವ್ವಾ. ಮಹಾಲಿಂಗ ಕಲ್ಲೇಶ್ವರನ ನೆರೆವ ಭರದಿಂ ನೊಂದು, ಉದಕ ಮೇಲ್ವಾಯ್ದ ಹಾಗಿರಬೇಕವ್ವಾ.
--------------
ಹಾವಿನಹಾಳ ಕಲ್ಲಯ್ಯ
ಮುಟ್ಟಿತ್ತು ಕೆಟ್ಟಿತ್ತೆಂದಡೆ, ಇನ್ನರಸುವ ಠಾವಾವುದಯ್ಯಾ ? ತನುವ ಮರೆದಡೆ, ನೆನಹಿನೊಳಗದೇನೊ ? ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ ? ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ ? ಅರಿವು ಲಿಂಗದಲ್ಲಿ ಪ್ರತಿಷೆ*ಯಾಗಿ, ನಿರ್ಲೇಪನಾಗಿ, ಮಹಾಲಿಂಗ ಕಲ್ಲೇರ್ಶವರನಲ್ಲಿ ಲೀಯವಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಮನಮನವೇಕಾರ್ಥವಾಗದವರಲ್ಲಿ, ತನುಗುಣ ನಾಸ್ತಿಯಾಗದವರಲ್ಲಿ, ಬುದ್ಧಿಗೆ ಬುದ್ಧಿ ಓರಣವಾಗದವರಲ್ಲಿ, ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ, ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ, ಅವರೊಡನೆ ಕುಳ್ಳಿರಲಾಗದು, ಸಮಗಡಣದಲ್ಲಿ ಮಾತನಾಡಲಾಗದು. `ಸಂಸರ್ಗತೋ ದೋಷಗುಣಾ ಭವಂತಿ' ಎಂದುದಾಗಿ, ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಸದ್ಭಕ್ತಿಯನರಿದವರ ಸಂಗದಿಂದ ನಿಮಗಾನು ದೂರವಾಗಿಪ್ಪೆನಯ್ಯಾ.
--------------
ಹಾವಿನಹಾಳ ಕಲ್ಲಯ್ಯ