ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು ಮಜ್ಜನಕ್ಕೆರೆವರೆಲ್ಲ ಶೀಲವಂತರೆ ? ಭವಿಪಾಕವನೊಲ್ಲೆವೆಂದು ಭುಂಜಿಸುವ ಉದರಪೋಷಕರೆಲ್ಲ ಶೀಲವಂತರೆ? ವರಲ್ಲ, ನಿಲ್ಲು ಮಾಣು. ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ
--------------
ಚನ್ನಬಸವಣ್ಣ
ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ, ಜಂಗಮಪಾದವು ಜಗದ್ಭರಿತವಾಗಿರ್ಪುದಯ್ಯಾ, ಜಂಗಮಪಾದವು ಆದಿಯಿಂದತ್ತತ್ತಲಾಗಿರ್ಪುದಯ್ಯಾ, `ಚರಣಂ ಪವಿತ್ರಂ ವಿತತಂ ಪುರಾಣಂ್ಡ ಎಂದುದಾಗಿ, ಜಂಗಮದ ಶ್ರೀಪಾದವ ಭಕ್ತಿಯಿಂದ ಪಿಡಿದ ಸದ್ಭಕ್ತನು ದುರಿತಾಂಬುಧಿಯಿಂದ ದೂರವಾಗಿರ್ಪನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಂಗಮ ಘನವೆಂಬೆನೆ ? ಬೇಡಿ ಕಿರಿದಾಯಿತ್ತು. ಲಿಂಗ ಘನವೆಂಬೆನೆ ? ಕಲುಕುಟಿಗರ ಕೈಯೆ ಮಾಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ ? ತನುಮನಧನ ವಂಚನೆಯಿಂದ ಕಿರಿದಾಯಿತ್ತು. ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಮದೇವನೆಂತೊಲಿವನೊ ?
--------------
ಚನ್ನಬಸವಣ್ಣ
ಜಂಗಮಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ ಮರೆಯಬೇಕು. ಜಂಗಮಲಿಂಗಭಕ್ತನಾದಡೆ ಪೂರ್ವಕುಲವ ಬೆರಸಲಾಗದು. ಜಂಗಮಲಿಂಗಪೂಜಕನಾದಡೆ ಮಾನವರನು ಉಪಧಾವಿಸಲಾಗದು. ಜಂಗಮಲಿಂಗವೀರನಾದಡೆ ಅರ್ಥವ ಕಟ್ಟಲಾಗದು. ಜಂಗಮಲಿಂಗಪ್ರಸಾದಿಯಾದಡೆ ಬೇಡಿದಡೆ ಇಲ್ಲೆನ್ನಲಾಗದು. ಜಂಗಮಲಿಂಗಪ್ರಾಣಿಯಾದಡೆ ಲಾಂಛನದ ನಿಂದೆಯ ಕೇಳಲಾಗದು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಜಂಗಮಲಿಂಗಭಕ್ತಿ.
--------------
ಚನ್ನಬಸವಣ್ಣ
ಜಗಭರಿತನೆನ್ನ ದೇವ, ಜಗವ ಹೊದ್ದನೆನ್ನ ದೇವ. ಭಕ್ತನ ಕರಸ್ಥಲಕ್ಕೆ ಬಂದನೆನ್ನ ದೇವ, ಭಕ್ತನನವಗ್ರಹಿಸಿಕೊಂಡನಾಗಿ ಎನ್ನ ದೇವ. ``ಓಂ ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ ಆಸೀನೇಭ್ಯಃ ಯಜಾಮ ದೇವಾನ್ಯದಿಶಕ್ನವಾಮ ಮಮಾಜ್ಯಾಯಸಃ ತಂ ಸಮಾವೃಕ್ಷಿ ದೇವಾ ಎಂದುದಾಗಿ ಎನ್ನ ದೇವ. ಇದು ಕಾರಣ, ಕೂಡಲಚೆನ್ನಸಂಗಮದೇವರು ಅಕ್ಷರಾಕ್ಷರವ ಮೀರಿದ ಘನವು.
--------------
ಚನ್ನಬಸವಣ್ಣ
ಜ್ಞಾನಾಮೃತಜಲನಿಧಿಯ ಮೇಲೆ, ಸಂಸಾರವೆಂಬ ಹಾವಸೆ ಮುಸುಕಿಹುದು. ನೀರ ಮೊಗೆವರು ಬಂದು ನೂಕಿದಲ್ಲದೆ ತೆರಳದು. ಮರಳಿ ಮುಸುಕುವುದ ಮಾಣಿಸಯ್ಯಾ. ಆಗಳೂ ಎನ್ನುವ ನೆನೆವುತ್ತಿರಬೇಕೆಂದು ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು, ದಿವಾರಾತ್ರಿ ತನ್ನನರಿಯಬೇಕೆಂದು. ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳರ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಜಂಗಮಪ್ರಸಾದವ ಲಿಂಗಕ್ಕೆ ಸಲಿಸಬಾರದೆಂಬ ಮಾತ ಕೇ?ಲಾಗದು. ಪ್ರಸಾದವೆ ಲಿಂಗ, ಆ ಲಿಂಗವೆ ಅಂಗ; ಆ ಜಂಗಮವೆ ಚೈತನ್ಯ, ಆ ಚೈತನ್ಯವೆ ಪ್ರಸಾದ. ಇಂತೀ ಉಭಯದ ಬೇಧವನರಿಯರು ನೋಡಾ ! ಜಿಹ್ವೆಯಲ್ಲಿ ಉಂಡ ರಸ ಸರ್ವೇಂದ್ರಿಯಕ್ಕೆ ಬೇರೆಯಾಗಬಲ್ಲುದೆ ? ಪ್ರಾಣಲಿಂಗದಲ್ಲಿ ಸವಿದು ಭಾವಲಿಂಗದಲ್ಲಿ ತೃಪ್ತಿಯಾದ ಬಳಿಕ ಇಷ್ಟಲಿಂಗಕ್ಕೆ ಭಿನ್ನವುಂಟೆ ? ಇದನರಿದು ಅರ್ಪಿಸಿ ಸುಖಿಸಲೊಲ್ಲರು. ದೇಹಭಾವದಲ್ಲಿ ಕೊಂಬುದು ಅನರ್ಪಿತವೆಂದರಿಯರು. ಲಿಂಗಕ್ಕೂ ಭಕ್ತಂಗೂ ಭೇದವಿಲ್ಲೆಂಬುದನರಿಯಲರಿಯರು. ಜಂಗಮಮುಖದಿಂದೊಗೆದುದು ಪ್ರಸನ್ನಪ್ರಸಾದವೆಂದರಿಯರು. ಸರ್ವೇಂದ್ರಿಯಮುಖದ್ವಾರೇ ಸದಾ ಸನ್ನಿಹಿತಃ ಶಿವಃ ಪ್ರಾಣೇ ಲಿಂಗಸ್ಥಿತಿಂ ಮತ್ವಾ ಯೋ ಭುಂಕ್ತೇ ಲಿಂಗವರ್ಜಿತಃ ಸಃ ಸ್ವಮಾಂಸಂ ಸ್ವರುಧಿರಂ ಸ್ವಮಲಂ ಭಕ್ಷಯತ್ಯಹೋ ತಸ್ಮಾಲ್ಲಿಂಗಪ್ರಸಾದಂ ಚ ನಿರ್ಮಾಲ್ಯಂ ತಜ್ಜಲಂ ತಥಾ ನೈವೇದ್ಯಂ ಚರಲಿಂಗಸ್ಯ ಶೃಣು ಷಣ್ಮುಖ ಸರ್ವದಾ ಇದು ಕಾರಣ, ಪ್ರಸಾದವೆ ಇಷ್ಟ ಪ್ರಾಣ ಭಾವವಾಗಿ ನಿಂದುದನರಿಯರು. ಇಂತೀ ಮರ್ಮವ ನಮ್ಮ ಬಸವಣ್ಣ ಬಲ್ಲ. ಇದನೆಲ್ಲರಿಗೆ ತೋರಿ, ಲಕ್ಷದ ಮೇಲೆ ತೊಂಬತ್ತುಸಾವಿರ ಜಂಗಮದ ಒಕ್ಕುದನೆತ್ತಿಕೊಂಬ; ಅಚ್ಚಪ್ರಸಾದವ ಲಿಂಗಕ್ಕಿತ್ತುಕೊಂಬ. ಪ್ರಸಾದಿಗಳು ಮೂವತ್ತಿರ್ಛಾಸಿರದೊಳಗೆ ತಾನೊಬ್ಬನಾಗಿ ಸುಖಿಸುವುದ ನಾನು ಬಲ್ಲೆನಾಗಿ, ಸಂದೇಹವಳಿದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ ಆರೋಗಿಸಿ ಕೊಡುವುದು ನೋಡಾ ! ಜಂಗಮದಾಪ್ಯಾಯನವೆ ಲಿಂಗದಾಪ್ಯಾಯನ ನೋಡಾ ! ಜಂಗಮತೃಪ್ತಿಯೆ ಲಿಂಗತೃಪ್ತಿನೋಡಾ ! ಜಂಗಮವಾರೋಗಿಸಿ ಡರ್ರನೆ ತೇಗಿದಡೆ ಂಗೈಯಲೆರಗುವುದು ನಮುಕ್ತಿಫ ನೋಡಾ ! ಜಂಗಮಮುಖದಲು ತೃಪ್ತನಾದನೆಂದು `ಬಾರಯ್ಯಾ ಬಸವ್ಡ ಎಂದು ಕೈವಿಡಿದು, ತೆಗೆದಪ್ಪಿ ಮುದ್ದಾಡಿ, ತಕ್ಕೈಸಿಕೊಂಡು, ನಿನ್ನ ಹೊರಗಿರಿಸಲಾರೆನೆಂದು ತನ್ನ ಹೃದಯಕಮಲದಲ್ಲಿ ಇಂಬಿಟ್ಟುಕೊಂಡು ಕೂಡಲಚೆನ್ನಸಂಗಯ್ಯಂಗೆ ಬಸವ ಪ್ರಾಣಲಿಂಗವಾದ.
--------------
ಚನ್ನಬಸವಣ್ಣ
ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ ಕಾಯಪುರದ ಒಂದು ಪಟ್ಟಣವ ಸಾಧಿಸುವನೆಂಬರಿಗೆ ಸಾಧ್ಯವಿಲ್ಲ ಭೇದಿಸುವೆನೆಂಬರಿಗೆ ಭೇದ್ಯವಲ್ಲ ಮರಹು ಮಹಾಕತ್ತಲೆಗಳೆಂಬ (ಕ)ರಿಗಳು ಕುಹಕವೆಂಬ ಕೊತ್ತಳ, ಮಹಾಪಾಶ ಉನ್ಮತ್ತ ಅಹಂಕಾರವೆಂಬುದೊಂದು ಆಳು ಕುದುರೆ ಇದನಾರು ಸಾಧಿಸಬಲ್ಲರಯ್ಯಾ ಪ್ರಾಣಪಂಚಾಕ್ಷರಿಯನೆ ನಿರ್ಮಿಸಿಕೊಂಡು ಹಿಂದಣಬೇರ ಕಟ್ಟೊರಿಸಿ ಕಿತ್ತು, ಮುಂದಣ ಭವಾಂಬುಧಿಯನೆಲ್ಲ ಬಿಟ್ಟು ಮನವೆಂಬ ಬಿಲ್ಲಿಗೆ ತನುವೆಂಬ ಹೆದೆಯ ಮಾಡಿಕೊಂಡು ಗುರುವೆಂಬ ಗುರಿಯ ನೋಡಿಕೊಂಡು, ಏಕಭಾವದಲ್ಲಿ ಎಸೆವುತ್ತಿರಲು ಭವಹರಿದು, ಕಾಲಕರ್ಮದ ಶಿರವರಿದು ಅಂಗವಿಕಾರವೆಂಬ ಅರಸು ಸತ್ತು, ಪಂಚಭೂತಗಳೆಲ್ಲ ಪ್ರಳಯಕ್ಕೊಳಗಾದವು. ಅಷ್ಟಮದಂಗಳ ನಷ್ಟವಾಯಿತ್ತು ಕೋಟೆ ಕೋಳು ಹೋಯಿತ್ತು, ಪಟ್ಟಣ ಸಾಧ್ಯವಾಯಿತ್ತು ಒಳಕೋಟೆಗೆ ಕಿಚ್ಚನ್ನಿಕ್ಕೆ, ಪೃಥ್ವಿ ವಿಶ್ವವೆಲ್ಲ ಬೆಂದು ಬೆಳಕಾಯಿತ್ತು_ ಇಂತಪ್ಪ ಗುರು-ಲಿಂಗ-ಜಂಗಮಕ್ಕೆ ಸಮವಾಗಿ ಸಿಕ್ಕಿತ್ತು ಸಂಸಾರಬಯಲು ಇಂತಪ್ಪ ಆ ಪ್ರಸಾದವನಾರು ಬಲ್ಲರೆಂದರೆ ಪ್ರಭುವಿನ ಬಳಿಯ ಬಸವಣ್ಣಂಗಲ್ಲದೆ ಅಳವಡದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜೈನನ ಮನದ ಕೊನೆಯ [ಮೊನೆಯ] ಮೇಲೆ ಹೊಲೆಯಿಪ್ಪುದಲ್ಲದೆ ವ್ರತವಿಲ್ಲ. ಸನ್ಯಾಸಿಯ ಮನದ ಕೊನೆಯ ಮೊನೆಯ ಮೇಲೆ ಹೆಣ್ಣಿಪ್ಪುದಲ್ಲದೆ ಸನ್ಯಾಸವಿಲ್ಲ. ತಪಸ್ವಿಯ ಮನದ ಕೊನೆಯ ಮೊನೆಯ ಮೇಲೆ ಸಂಸಾರವಿಪ್ಪುದಲ್ಲದೆ ತಪಸ್ಸಿಲ್ಲ. ಶ್ರಾವಕನ ಮನದ ಕೊನೆಯ ಮೊನೆಯ ಮೇಲೆ ಕೊಲೆಯಿಪ್ಪುದಲ್ಲದೆ ಜಿನನಿಲ್ಲ. ಶೀಲವಂತನ ಮನದ ಕೊನೆಯ ಮೊನೆಯ ಮೇಲೆ ಭವವಿಪ್ಪುದಲ್ಲದೆ ಲಿಂಗವಿಲ್ಲ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರ ಮನದ ಕೊನೆಯ ಮೊನೆಯ ಮೇಲೆ ಲಿಂಗವಿಪ್ಪುದು.
--------------
ಚನ್ನಬಸವಣ್ಣ
ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ ಮಾತ ನುಡಿಯಲಾಗದು, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ, ಜಾಗ್ರತ ಸ್ವಪ್ನ ಸುಷುಪ್ತಿಯೆಂಬ ವ್ಯಾಪಾರತ್ರಯದ ಅನುಮಾನವರಿತು, ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ ತಾಪತ್ರಯವಂ ಕೊಳಲಾಗದೆ, ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯದ ಭ್ರಾಂತಿಯಡಗಿ, ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ, ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ ಲಿಂಗತ್ರಯದ ಭೇದವಂ ಭೇದಿಸಿ, ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ, ಸ್ವರ್ಗಮತ್ರ್ಯ ಪಾತಾಳವೆಂಬ ಲೋಕತ್ರಯವನತಿಗಳದು, ಇಹ ಪರ ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ, ಮಥನ ನಿರ್ಮಥನ ಸಮ್ಮಥನವೆಂಬ ಮಥನತ್ರಯದಲ್ಲಿ ನಿರತನಾಗಿ, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯದ ಹಮ್ಮ ಬಿಟ್ಟು, ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವನೊರಸಲೀಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಂ ನಿರ್ಮಲವಂ ಮಾಡಿ, ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ ನಿಂದಾತ್ರಯಂಗಳಂ ಕೇಳದೆ, ಚಂದ್ರ ಸೂರ್ಯ ಅಗ್ನಿ ಎಂಬ ನೇತ್ರತ್ರಯದ ಹೊಲಬನರಿದು, ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ ವೇಳಾತ್ರಯವಂ ಮೀರಿ, ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಅಗ್ನಿತ್ರಯಕ್ಕೆ ಇಂಬುಗೊಡದೆ, ಅಧೋನಿರಾಳ ಮಧ್ಯನಿರಾಳ ಊಧ್ರ್ವನಿರಾಳವೆಂಬ ನಿರಾಳತ್ರಯದಲ್ಲಿ ನಿರತನಾಗಿ, ಅನುಭಾವ ಮಹಾನುಭಾವ ಸ್ವಾನುಭಾವವೆಂಬ ಅನುಭಾವತ್ರಯಂಗ?ಲ್ಲಿ ಬೀಸರಹೊಂದದೆ, ಬಾಲ್ಯ ಯೌವನ ವೃದ್ಧಾಪ್ಯವೆಂಬ ತನುತ್ರಯಂ ಮರೆದು, ತನು ಮನ ಧನದಲ್ಲಿ ಶುದ್ಧನಾಗಿ, ಆಗಮತ್ರಯದಲ್ಲಿ ಅನುವರಿತು, ಇಂತೀ ತ್ರಯ ಸಂಪಾದನೆಯಂ ಮೀರಿದ ನಿಜಶರಣನೆ ಕೂಡಲಚೆನ್ನಸಂಗಯ್ಯನೆಂದರಿದು ಸುಖಿಯಾದೆ£ಯ
--------------
ಚನ್ನಬಸವಣ್ಣ
ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಸ್ವಪ್ನಪ್ರಸಾದಿಗಳುಂಟಾಗಿ. ಸ್ವಪ್ನಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಸುಷುಪ್ತಿಪ್ರಸಾದಿಗಳುಂಟಾಗಿ. ಸುಷುಪ್ತಿಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಲಿಂಗಪ್ರಸಾದಿಗಳುಂಟಾಗಿ. ಈ ಒಂದರಲ್ಲು ನಿಯತರಲ್ಲಾಗಿ ನಾವು ಭಕ್ತರು, ನಾವು ಶರಣರು, ನಾವು ಹಿರಿಯರೆಂಬ ಮಧುಭುಂಜಕರ ಮೆಚ್ಚುವನೆ, ನಮ್ಮ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು. ಅದು ಹೇಂಗೆ ? ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ ಬಣ್ಣ ಅಧಿಕವಲ್ಲದೆ ಕಿರಿದಾಗದು, ಇವರು ನನ್ನನೇಕೆ ಘಾಸಿ ಮಾಡಿದರೆನ್ನದು. ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು, ಬಂದ ರಸವನಟ್ಟಡೆ, ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು, ನನ್ನನೇಕೆ ನೋಯಿಸಿದರೆಂದೆನ್ನದು. ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು, ತನ್ನಲ್ಲಿ ದುಃಖಗೊಳ್ಳದು. ಈ ತ್ರಿವಿಧದ ಗುಣದ ಪರಿಯಲ್ಲಿ; ಭಕ್ತನು ತನ್ನ ಸುಗುಣವ ಬಿಡದ ಕಾರಣ ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ ಪ್ರಾಣಲಿಂಗಿಯಹ ಶರಣನಹ ಐಕ್ಯನಹ. ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಂಗಮ ಪ್ರಸಾದದಿಂದ ಲಿಂಗಕ್ಕೆ ಚೈತನ್ಯಸ್ವರೂಪವೆಂದರಿದು, ಪಾದೋದಕದಿಂದ ಲಿಂಗಕ್ಕೆ ಮಜ್ಜನವೆಂದರಿದು, ಜಂಗಮ ಪ್ರಸಾದವೆ ಲಿಂಗಕ್ಕೆ ಅರ್ಪಿತವಾಗಿ, ಲಿಂಗದಿಂದ ನೋಡುತ್ತ, ಕೇಳುತ್ತ, ರುಚಿಸುತ್ತ, ಮುಟ್ಟುತ್ತ, ವಾಸಿಸುತ್ತ, ಕೂಡುತ್ತ, ಅಹಂ ಮಮತೆಗೆಟ್ಟು, ಸಂದು ಸಂಶಯವರತು, ಹಿಂದ ಮುಂದ ಹಾರದಿಪ್ಪುದೇ ನಿಜವೀರಶೈವ. ಇಂತಲ್ಲದೆ ಉಳಿದುದೆಲ್ಲವು ಇತರ ಶೈವ ಕಾಣಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜಂಗಮವೆ ಪ್ರಾಣವೆಂದರಿದ ಭಕ್ತಂಗೆ, ಜಂಗಮಪ್ರಸಾದವಲ್ಲದೆ ಲಿಂಗಪ್ರಸಾದವ ಕೊಳಲಾಗದು. ಜಂಗಮಪ್ರಸಾದ ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು. ದೆಂತೆಂದಡೆ : ಜಂಗಮಾದಿ ಗುರೂಣಾಂ ಚ ಅನಾದಿ ಸ್ವಯಲಿಂಗವತ್ ಆದಿಪ್ರಸಾದವಿರೋಧೇ ಇಷ್ಟೋಚ್ಛಿಷ್ಟಂತು ಕಿಲ್ಬಿಷಂ ಎಂದುದಾಗಿ, ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು. ಈ ಭೇದವನರಿದು ಜಂಗಮಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊ?ಲಾಗದು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ: ಜ್ಞಾನ, ತನುವಿನ ಪರಿಣಾಮ, ಸುಜ್ಞಾನ, ಪ್ರಾಣದ ಪರಿಣಾಮ, ಕೈವಲ್ಯಜ್ಞಾನ, ಮನದ ಪರಿಣಾಮ. ಗಮನದ ಭಾವದರಿವು ತ್ರಿವಿಧ: ವೈಲ, ವೈರಂಭಣ, ಮುಖಪ್ರಭಂಜನ. ಅಂತರ್ವಹ ವಾಯು ಭಾವದ ಚರಿತ್ರ. ಇದರ ಭೇದವ ಕೂಡಲಚೆನ್ನಸಂಗಾ ನಿಮ್ಮ ಶರಣನಲ್ಲದೆ ಕುಹಕಯೋಗಿಗಳವರೆತ್ತ ಬಲ್ಲರು ?
--------------
ಚನ್ನಬಸವಣ್ಣ
ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ ಉನ್ನತಾಸನದಲ್ಲಿ ಮೂರ್ತಮಾಡಿಸಿ ವಿಶ್ವಾಸದಿಂದ ಪಾದತೀರ್ಥವ ಪಡಕೊಂಡು- ಆ ಸಮಯದಲ್ಲಿ ಆ ಜಂಗಮದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ತೀರ್ಥವ ಬಿಡಲಾಗದು. ಅದೆಂತೆಂದಡೆ: ತಾ ಭಾವಿಸಲು ತೀರ್ಥವಾಯಿತ್ತು, ಆ ಭಾವವ ಬಿಟ್ಟಡೆ ಅದು ನೀರೆನಿಸಿತ್ತು. ಇದು ಸಕಲಮಾಹೇಶ್ವರರಿಗೂ ಸನ್ಮತ. ಅಶೀಲವ್ರತಿಗಳಾದಡೆ, ಪಾದೋದಕ ತ್ಯಾಗವ ಮಾಡುವುದಯ್ಯಾ. ಅದೆಂತೆಂದಡೆ: ಪ್ರಕ್ಷಾಲಿತಂ ಚ ಪಾದಾಂಬು ಜಂಗಮೋ ಲಿಂಗವರ್ಜಿತಃ ಪಾದೋದಕಂ ತ್ಯಜೇತ್ ಜ್ಞಾನೀ ಇದಂ ಮಾಹೇಶಸಮ್ಮತಂ ಆ ಸಮಯದಲ್ಲಿ ಲಿಂಗವಿದ್ದಡೆ, ಆ ತೀರ್ಥವ ಅರ್ಪಿಸಿ ಸಲಿಸುವುದು. ಬೇರೆ ತೀರ್ಥವ ಪಡಕೊಳಲಾಗದು, ಕೂಡಲಚೆನ್ನಸಂಗಯ್ಯಾ ನಿಮ್ಮಾಣೆ
--------------
ಚನ್ನಬಸವಣ್ಣ
ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ ಬಲ್ಲರು ? ಮಹಾಮುನಿಗಳೆತ್ತ ಬಲ್ಲರು ? ಅನೇಕ ಕಾಲ ಮಹಾಕ್ಷೇತ್ರದಲ್ಲಿ ನಿಜನಿವಾಸಿಯಾಗಿರ್ದನು, ನಮ್ಮ ಮಡಿವಳನು. ಆ ಮಡಿವಳನ ಧ್ಯಾನದಲ್ಲಿ ಆರೂಢನಾಗಿರ್ದನು ನಮ್ಮ ಬಸವಣ್ಣನು. ಆ ಬಸವಣ್ಣನು ಬಪ್ಪಲ್ಲಿ ಮೈಯೆಲ್ಲ ಕಣ್ಣಾಗಿ, ಉತ್ತಮಾಂಗವೆಲ್ಲ ಕಣ್ಣಾಗಿ, ರೋಮ ರೋಮಾದಿಗಳೆಲ್ಲ ಕಣ್ಣಾಗಿ ಬಂದನಯ್ಯಾ, ಆ ಬಸವಣ್ಣನ ಭಕ್ತಿಯ ಜಡವ ಹರಿಯ ಬಂದನಯ್ಯಾ ನಮ್ಮ ಮಡಿವಾಳಯ್ಯನು. ಇವರಿಬ್ಬರ ನಿತ್ಯಪ್ರಸಾದಿ ನಾನಾದೆನು, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಂಗಮವೆ ಪರವೆಂದರಿದಡೇನು, ಆ ಜಂಗಮದಂಗವಲ್ಲವೆ ಲಿಂಗ ? ಆ ಲಿಂಗಚೈತನ್ಯದರಿವೆಲ್ಲವು ಜಂಗಮವಲ್ಲವೆ ? ಅಂಗವಿಲ್ಲದ ಜೀವಕ್ಕೆ, ಆತ್ಮನಿಲ್ಲದ ಅಂಗಕ್ಕೆ, ಸರ್ವಭೋಗದ ಸುಖವುಂಟೆ ? ಮಣ್ಣಿಲ್ಲದೆ ಮರನುಂಟೆ ? ಮರನಿಲ್ಲದೆ ಹಣ್ಣುಂಟೆ? ಹಣ್ಣಿಲ್ಲದೆ ಸ್ವಾದವುಂಟೆ ? ಹೀಂಗರಿವುದಕ್ಕೆ ಕ್ರಮ: ಅಂಗವೇ ಮಣ್ಣು, ಲಿಂಗವೇ ಮರನು, ಜಂಗಮವೇ ಫಲವು, ಪ್ರಸಾದವೆ ರುಚಿಯು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ
--------------
ಚನ್ನಬಸವಣ್ಣ
ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು, ಅದೆಂತೆಂದಡೆ: ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ ಮರಳಿ ತಾನು ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು, ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು, ಅದರ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಲಿಂಗವ ನಿರೀಕ್ಷಿಸಿ, ವಾಮಹಸ್ತದಲ್ಲಿ ನಿರಂಜನ ಪ್ರಣವವ ಲಿಖಿಸಿ ಪೂಜೆಯ ಮಾಡಿ, ಆಮೇಲೆ ಜಂಗಮದ ಪಾದವ ಹಿಡಿದು ಪೂಜೆಯ ಮಾಡಿ ಆ ಪೂಜೆಯನಿಳುಹಿ, ಅದೇ ಉದಕದ ಪಾತ್ರೆಯಲ್ಲಿ ಶಿಕ್ಷಾಪಾದೋದಕವ ಮಾಡಿ, ಪಾದದ್ರವವ ತೆಗೆದು ಐದಂಗುಲಿಗಳಲ್ಲಿ ಪಂಚಾಕ್ಷರವ ಲೇಖನವ ಮಾಡಿ, ಮಧ್ಯದಲ್ಲಿ ಮೂಲಪ್ರಣವವ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜೆಯ ಮಾಡಬೇಕು. ಶಿವಧರ್ಮೋತ್ತರೇ: ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಂ ಶಿವರಹಸ್ಯೇ : ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಎಂದುದಾಗಿ ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು. ಅದೆಂತೆಂದಡೆ: ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ, ಜಂಗಮವಾದ ಕಾರಣ, ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ ಲಿಂಗಪ್ರಸಾದವ ಪಾದಕ್ಕೆ ತೋರಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ ಚೈತನ್ಯಸ್ವರೂಪವಾದ ಕಾರಣ, ಆ ಜಂಗಮವೆ ಮುಖ್ಯಸ್ವರೂಪು. ಇಂತಪ್ಪ ಜಂಗಮಪಾದವೆ ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು. ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು ಶ್ರುತಿಗಳು ಪೊಗಳುತಿರ್ದ ಕಾರಣ, ಇಂತಪ್ಪ ಚರಮೂರ್ತಿಯ ಪಾದವನು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚಿಸಿದಂತಹುದೆ ಲಿಂಗಪೂಜೆ. ಆಮೇಲೆ ಆ ಮೂರ್ತಿಯ ಉಭಯಪಾದಗಳ ಹಿಮ್ಮಡ ಸೋಂಕುವಂತೆ ಹಸ್ತವ ಮಡಗಿ ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ, ಆ ಶಿಕ್ಷಾಪಾದೋದಕವನು ಬಲದಂಗುಷ* ಮೇಲೆ ಷಡಕ್ಷರಮಂತ್ರವ ಆರುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ*ದ ಮೇಲೆ ಪಂಚಾಕ್ಷರೀಮಂತ್ರವ ಐದುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ, ಮಧ್ಯದಲ್ಲಿ `ಓಂ ಬಸವಾಯ ನಮಃ ಎಂದು ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ, ಅಲ್ಲಿ ಭಾವಲಿಂಗವೆಂದು ಭಾವಿಸಿ, ನೀಡಿದ ಉದಕವೆ ಬಟ್ಟಲಲಿ ನಿಂದು ಮಹತ್ಪಾದವೆಂದೆನಿಸುವುದು, ಈ ಮಹತ್ಪಾದದಲ್ಲಿ ದ್ರವವ ತೆಗೆದು ಮತ್ತೆ ಪೂಜಿಸಬೇಕಾದಡೆ, ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು. ಅದೇನು ಕಾರಣವೆಂದಡೆ; ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ, ಏಕಕುಸುಮವನೆ ಧರಿಸಿ ಪೂಜೆಯಮಾಡಿ ನಮಸ್ಕರಿಸುವುದೆ ಜಂಗಮಪೂಜೆ. ಆ ಪೂಜೆಯ ತೆಗೆದ ಶಿಷ್ಯನು `ಶರಣಾರ್ಥಿ ಸ್ವಾಮಿ ಎಂದು ಬಟ್ಟಲವನೆತ್ತಿಕೊಟ್ಟಲ್ಲಿ, ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ, ಮೂಲಮಂತ್ರದಿಂದ ಮೂರುವೇಳೆ ಪ್ರದಕ್ಷಿಣವ ಮಾಡಿ ನಮಸ್ಕರಿಸಿ, ಲಿಂಗದ ಮಸ್ತಕದ ಮೇಲೆ ಮೂರುವೇಳೆ ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ, ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ. ತಾವು ಲಿಂಗವನೆತ್ತಿ ಸಲಿಸಿದುದೆ ಲಿಂಗಪಾದೋದಕವೆನಿಸುವುದು; ಅದೇ ಶಿಕ್ಷಾಪಾದೋದಕ. ಬಟ್ಟಲನೆತ್ತಿ ಸಲ್ಲಿಸಿದಲ್ಲಿ ಜಂಗಮಪಾದೋದಕವೆನಿಸುವುದು; ಅದೇ ಜ್ಞಾನಪಾದೋದಕ. ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ `ಶರಣಾರ್ಥಿ ಎಂದು ಶಿಷ್ಯೋತ್ತಮನು ಎದ್ದು, ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ ಅಂಗುಷ*ಯುಗಲಂ ಪ್ರೋಕ್ತಂ ಪ್ರಣಾಮೋ[s]ಷ್ಟಾಂಗಮುಚ್ಯತೇ ಎಂದು ಭೃತ್ಯೋಪಚಾರಗಳಿಂದ ಪ್ರಣತಿಂಗೈದು ಅಪ್ಪಣೆಯ ಪಡೆದುಕೊಂಡು ಬಂದು, ಆ ಜಂಗಮದ ಮರ್ಯಾದೆಯಲ್ಲಿಯೆ ತಾನು ಸ್ವೀಕರಿಸುವುದು. ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು ಸಮರಸಭಾವದಿಂದ ಸೇವನೆ ಮಾಡಿದಲ್ಲಿ, ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ, ಗುರುವೆ ಶಿಷ್ಯ, ಶಿಷ್ಯನೆ ಗುರು. ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ: ಆ ಶಿಷ್ಯನು ಪಡೆದುಕೊಂಡ ಪಾದೋದಕವ ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ ಗುರುವೆ ಶಿಷ್ಯನಾಗಿಪ್ಪನು. ಆ ಗುರು ಸೇವನೆಯ ಮಾಡಿ ಉಳಿದ ಉದಕವ ಶಿಷ್ಯ ಭಕ್ತಿಭಾವದಿಂದ ಸೇವನೆ ಮಾಡಿದಲ್ಲಿಗೆ ತಚ್ಛಿಷ್ಯನಾದಹನು. ಈ ಮರ್ಮವ ತಿಳಿದು ಗುರುಶಿಷ್ಯರೀರ್ವರು ಸಲಿಸಿದ ಬಳಿಕ ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು. ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು; ಇದೇ ಆಚರಣೆ. ಇದನರಿಯದಾಚರಿಸುವವರಿಗೆ ನಿಮ್ಮ ನಿಲವರಿಯಬಾರದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಬೇಡುವ ತುಡುಗುಣಿಗಳ ಏನೆಂಬೆನಯ್ಯಾ ? ಬೇಡಲಾಗದು ಭಕ್ತನ, ಕಾಡಲಾಗದು ಭವಿಯ, ಬೇಡಿ ಕಾಡಿ ಒಡಲ ಹೊರೆದನಾದರೆ, ಬೇಟೆಯನಾಡಿದ ಮೊಲನನಟ್ಟು ಬಾಣಸವ ಮಾಡಿ ನಾಯಿ ತಿಂದು ಮಿಕ್ಕುದ ತಾ ತಿಂದಂತೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜೀವನ ಪಾಪವ ಜೀವನದಲ್ಲಿಯೇ ಕಳೆವುದು. ``ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋ[s]ಕ್ಷಯ ಏವ ಚ ಎಂಬುದಾಗಿ ಕೂಡಲಚೆನ್ನಸಂಗಯ್ಯ, ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸುವುದು
--------------
ಚನ್ನಬಸವಣ್ಣ
ಜ್ಞಾನ ತನ್ನೊಳಗೆ, ಅಜ್ಞಾನ ತನ್ನೊಳಗೆ, ಎರಡುವನರಿದ ಸಹಜಸುಜ್ಞಾನಿ ಸುಸಂಗಿ ಲಿಂಗವಶಕನಾಗಿದ್ದು ಪರಿಣಾಮಿ ಕೂಡಲಚೆನ್ನಸಂಗಾ, ನಿಮ್ಮ ಶರಣ.
--------------
ಚನ್ನಬಸವಣ್ಣ
ಜಲಮಧ್ಯ ತನುವಳಯದ ಪ್ರಾಣಬದ್ಧನೆ? ಅಲ್ಲ. ನಿಜಕ್ಕೆ ಪರಿಚಾರಕ, ಸರ ಸುಸರ, ಮೇಘರೂಪು ಕಂಠಕ್ಕೆ ಮಂಗಳ ವಸ್ತು. ಇಂತಿದು ಕಾರಣ ಅಪ್ರತಿಗೆ ಪ್ರತಿ ಹುಟ್ಟಿ ಇದು ಸಹಿತ ಇದು ಸಾಹಿತ್ಯ ನೋಡಾ, ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ

ಇನ್ನಷ್ಟು ...