ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘಟಾಕಾಶ ಮಠಾವಕಾಶ ದಿಗಾಕಾಶ ಬಿಂದ್ವಾಕಾಶ ಭಿನ್ನಾಕಾಶ ಮಹದಾಕಾಶವೆಂಬ ಆಕಾಶಕೊಂಬತ್ತು ಬಾಗಿಲು. ಹೊಗಲಿಕಸಾಧ್ಯ ಹೊರಹೊಂಡಲಿಕಸಾಧ್ಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ ಸಾಧ್ಯವಲ್ಲದೆ ಉಳಿದವರಿಗಸಾಧ್ಯವು.
--------------
ಚನ್ನಬಸವಣ್ಣ
ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ, ಮಾಯೆಗೆ ಮರುಳಾದ ನರಜೀವಿಗಳ ಬಹಿರಂಗದ ಬರಿಯಸಂಸ್ಕಾರ ಮಾತ್ರದಿಂದ ಭವಿ ಭಕ್ತನಪ್ಪನೆ ? ಸೊಡ್ಡಳದೇವನ ಶುಭವಪ್ಪ ನೋಟದಿಂದ ಇಟ್ಟಿಯ ಹಣ್ಣುಗಳು ಸಿಹಿಯಾದುವಲ್ಲದೆ, ಲೋಕದ ಕಾಕುಮಾನವರ ನೋಟಮಾಟದಿಂದ ಸಿಹಿಯಾದುವೆ ? ಅದು ಕಾರಣ_ಅಂತಪ್ಪ ಸಾಮಥ್ರ್ಯವಿಲ್ಲದೆ ಕಡುಪಾತಕಿಗಳ ಹಿಡಿದು ತಂದು, ಲಿಂಗವ ಕೊಡಲು ಕಡೆತನಕ ಭವಿಗಳಾಗಿರ್ಪರಲ್ಲದೆ ಭಕ್ತರಾಗಲರಿಯರಯ್ಯಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಘಟದೊಳಗಿದ್ದ ಪದಾರ್ಥವು, ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು. ಹಾಗೆ_ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರಬಲದಿಂದ ಹೊರಹೊರಟಲ್ಲದೆ, ಅಂತರಂಗದಲಿರ್ದ ಭವರೋಗ ಮಾಣದು. ಇದು ಕಾರಣ, ಕೂಡಲಚೆನ್ನಸಂಗಮದೇವಾ. ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ.
--------------
ಚನ್ನಬಸವಣ್ಣ
ಘಟಸಂಸ್ಕಾರದಲ್ಲಿ ಪಟಲ ಹರಿವುದೆ, ಜೀವಸಂಸ್ಕಾರವಿಲ್ಲದನ್ನಕ್ಕ ? ವೇಷಧಾರಿತನದಲ್ಲಿ ಗ್ರಾಸವಹುದಲ್ಲದೆ, ಜ್ಞಾನಸಂಸ್ಕಾರವಿಲ್ಲದನ್ನಕ್ಕ ಭವವೆಂತು ಹರಿವುದು ? ಅಂಗಭವಿಯನು ಲಿಂಗಭವಿಯನು ಕಳೆದುಳಿದಲ್ಲದೆ, ಕೂಡಲಚೆನ್ನಸಂಗಯ್ಯನ ಹೊದ್ದಬಾರದು.
--------------
ಚನ್ನಬಸವಣ್ಣ