ಅಥವಾ
(1) (1) (0) (0) (0) (0) (0) (0) (1) (0) (0) (1) (0) (0) ಅಂ (1) ಅಃ (1) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (3) (0) (0) (1) (0) (0) (0) (0) (0) (0) (0) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾಲ್ಕು ಜಾವಕ್ಕೆ ಒಂದು ಜಾವ ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು. ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. ಮತ್ತೊಂದು ಜಾವ ಅಂಗನೆಯರ ಕುಚ, ಅಧರಚುಂಬನ ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು. ಇನ್ನೊಂದು ಜಾವವಿದೆ: ನೀವು ನೀವು ಬಂದ ಬಟ್ಟೆಯ ತಿಳಿದು ಮುಂದಳ ಆಗುಚೇಗೆಯನರಿದು, ನಿತ್ಯನೇಮವ ವಿಸ್ತರಿಸಿಕೊಂಡು ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ, ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ, ಇಂತೀ ಕೃತ್ಯದ ಕಟ್ಟ ತಪ್ಪದಿರಿ. ಅರುಣೋದಯಕ್ಕೆ ಒಡಲಾಗದ ಮುನ್ನವೆ ಖಗವಿಹಂಗಾದಿಗಳ ಪಶುಮೃಗನರಕುಲದುಲುಹಿಂಗೆ ಮುನ್ನವೆ ಧ್ಯಾನಾರೂಢರಾಗಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೊಡಬಲ್ಲಡೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ನಿತ್ಯನೇಮಿಗಳಿಗೆ ಹಿಂಜಾವವಾಯಿತ್ತು, ಕೃತ್ಯ ಪೂಜಕರುಗಳಿಗೆ ತತ್ಕಾಲವಾಯಿತ್ತು. ಅಂತರಂಗದ ವ್ರತದ ಲಿಂಗಾಂಗಿಗಳು ನಿಮ್ಮ ಇರವ ಶಿವಲಿಂಗದಲ್ಲಿ ಸಂಬಂಧಿಸಿಕೊಳ್ಳಿ, ಶುದ್ಧಸಿದ್ದಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ನೇಮವ ಮರೆಯದಿರಿ, ನಿತ್ಯಕೃತ್ಯವ ಚಿತ್ತದಲಿ ಅಚ್ಚೊತ್ತಿದಂತಿರಿಸಿಕೊಳ್ಳಿ. ಆರುವತ್ತುನಾಲ್ಕು ವ್ರತದೊಳಗಾದ ನಾನಾ ಭೇದಂಗಳ ಕ್ರೀಯ ಚಿತ್ತಶುದ್ಧವಾಗಿ, ನಿಮ್ಮ ಆತ್ಮನರಿವಿನ, ನಿಜದರುವಿನ ಕೊನೆಯಲ್ಲಿ ಕುರುಹಿಟ್ಟುಕೊಳ್ಳಿ. ತ್ರಿವಿಧಸ್ಥಲ ಮುಂತು ಆರುಸ್ಥಲದೊಳಗಾದ ಮುವತ್ತಾರು ಸ್ಥಲಭೇದವಾದ ಇಪ್ಪತ್ತೈದು ತತ್ವವ ಕೂಡಿದ ಒಂದರ ಭೇದದಲ್ಲಿ ಸಂದನರಿದುಕೊಳ್ಳಿ ಸರ್ವಲಿಂಗಾಂಗಿಗಳು. ಬಂಧಕರ್ಮಮೋಕ್ಷಂಗಳ ಸಂದಿಯ ವಿಚ್ಛಂದವ ಕೇಳಿ ಕಂಡುಕೊಳ್ಳಿ, ನೀವು ನೀವು ಬಂದ ಮಣಿಹದ ಬೆಂಬಳಿಯ ಕಂಡುಕೊಳ್ಳಿ. ನಿಮ್ಮ ಜ್ಞಾನ ಕಂಬಳಿಯ ಬೆಂಬಳಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗದಲ್ಲಿಗೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ