ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲೆಗಳೆದ ವೃಕ್ಷಕ್ಕೆ ತಳಿರ ಕೊನರಲ್ಲದೆ ಬೇರು ಸಾರಗೆಟ್ಟು ನಷ್ಟವಾದ ತರುವಿಂಗೆ ಮತ್ತೆ ಅಂಕುರವುಂಟೆ ? ತ್ರಿವಿಧಮಲಕ್ಕೆ ದೂರಸ್ಥನಾಗಿ ಅಪೇಯವೆಂದು ಬಿಟ್ಟಲ್ಲಿ ಮತ್ತರಿದು ಹಿಡಿದೆಹೆನೆಂದಡೆ ಪೇಯವಪ್ಪುದೆ ? ತಳನನಗೆದು ಮೇಲನರಿಯದೆ ಬೀಳಿಸಿಕೊಂಬವನಂತೆ ತನ್ನ ಊಣೆಯವ ತಾನರಿಯದೆ ಮೂಕೊರತಿ ಮೂಕುತಿಯ ಮಣಿಯ ತನಗೆಂದು ವಿಚಾರಿಸುವಂತೆ ಇಂತೀ ನಿರ್ವಾಣ ಬರುದೊರೆವೋಯಿತ್ತಲ್ಲಾ ಸಂಗನಬಸವಣ್ಣಾ. ಇವರುವನರಿಯದಂತೆ ಬ್ರಹ್ಮೇಶ್ವರಲಿಂಗಕ್ಕೆ ಉರಿಯದೆ ಹೋದರಲ್ಲಾ.
--------------
ಬಾಹೂರ ಬೊಮ್ಮಣ್ಣ