ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರಿಪುರಮಧ್ಯದಲ್ಲಿ ಮೂರಾರು ಮಂಡಲ ಇರ್ಪುದ ಕಂಡೆ. ಮಂಡಲದ ಮಧ್ಯದಲ್ಲಿ ಅಗ್ನಿಪರ್ವತವ ಕಂಡೆ. ಪರ್ವತಾಗ್ರದಲ್ಲಿ ಸಾವಿರಕಂಬದ ಮಂಟಪವ ಕಂಡೆ. ಮಂಟಪದ ಮಧ್ಯದಲ್ಲಿ ಬಿಳಿಯತಾವರೆಯ ಕಮಲವ ಕಂಡೆ. ಕಮಲದಲ್ಲಿ ಅಗಣಿತಕೋಟಿ ರವಿಶಶಿಕಳೆಯ ನುಂಗಿದ ನವರತ್ನದ ತಗಡವ ಕಂಡೆ. ಕಂಡವರು ಹಿಂಗಿ ಕಾಣದವರು ಬಂದು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೀಸಹಿದರು ಆ ಕರ್ ಬಚ್ಚ್ಯಾಕು ಘರ್‍ಮೇ ಆಗಮೇ ಜಲ್ಕು ಸಾಹೇಬಕು ಘರ್‍ಮೇ ಕರ್‍ಕರ್ ಸುಂತಿ ದಿಯಾತೋ ವೋ ಜಾಕರ್ ಪಾಚ್ಭಾಮೇ ಮರಗಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ. ಕುಲಗೇಡಿ ಗಂಡಗೆ ಅನಾಚಾರಿ ಹೆಂಡತಿ. ಇಬ್ಬರ ಸಂಗದಿಂದುತ್ಪತ್ಯವಿಲ್ಲದ ಒಂದು ಶಿಶುವು ಹುಟ್ಟಿ, ಒಡಹುಟ್ಟಿದ ಬಂಧುಗಳ ಕೊಂದು, ತಂದಿತಾಯಿಯ ಹತವ ಮಾಡಿ, ಸತ್ತವರ ನುಂಗಿ, ಬದುಕಿದವರ ಹೊತ್ತು ಇತ್ತ ಮರದು, ಅತ್ತ ಹರಿದು, ಸತ್ತು ಕಾಯಕವ ಮಾಡುತಿರ್ದುದು ಶಿಶು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನ್ನ ಗ್ರಾಮವಬಿಟ್ಟು ಅನ್ಯಗ್ರಾಮದಲ್ಲಿರಲು, ಒಡೆಯರು ನವಮುಗ್ಧರ ಕಳುಹಲು ನವಮುಗ್ಧರ ನವಹಳ್ಳಿಗೆ ಕಳುಹಿ, ಹಣವ ಧಣಿಯಂಗೆ ಮುಟ್ಟಿಸಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೊಟ್ಟ ಕಾಶಿಯ ಕಳೆಯದೆ ಸುಟ್ಟು, ಕಟ್ಟಿದ ವೀರಕಂಕಣ ಬಿಚ್ಚದೆ ಕಳೆದು, ಮೂರುಲೋಕದ ಗಂಡನೆಂದು ಮುಂಡಿಗೆಯ ಹಾಕಿ ಕಾಯಕವ ಮಾಡುತ್ತಿರ್ದೆನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಾಡಿನಮರದಮೇಲೆ ತೆಂಗಿನಮರವ ಕಂಡೆ. ಟೆಂಗಿನಮರದಮೇಲೆ ಮಾವಿನಮರವ ಕಂಡೆ. ಮಾವಿನಮರದಲ್ಲಿ ಮೇಲುದೇಶದ ಪಕ್ಷಿ ಗೂಡನಿಕ್ಕಿದುದ ಕಂಡೆ. ಶ್ವೇತವರ್ಣ ಅಗ್ನಿಮುಖ ಕಿಡಿಗಣ್ಣು ಅಂಡಜಾತಪಕ್ಷಿ ಇರುವುದ ಕಂಡೆ. ತತ್ತಿಯಲ್ಲಿ ಎರಡು ಪಕ್ಷಿ ಪುಟ್ಟಿದುದ ಕಂಡೆ. ನಡುವಲ್ಲಿ ಹಲವು ಮರಿಗಳುದಯವಾದುದ ಕಂಡೆ. ಕಾಗಿಯ ಮರಿಗಳು ನುಂಗಿ ಪಕ್ಷಿಯ ಕೊಂದು ಉಭಯ ಮರ ಮೆಟ್ಟಿ ಹಾರಿ ಮಾವಿನಮರದ ಗೂಡಿನಲ್ಲಿ ಅಡಗಲು ಆ ಮರ ಬಯಲಾಯಿತ್ತು. ಅದಡಗಿದಲ್ಲಿ ಅದಡಗಿದಾತನೇ ಮಾಯಾಕೋಳಾಹಳ ಶರಣನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಮ್ಮನ ಪ್ರಸಾದ, ಅಣ್ಣಗಲ್ಲದೆ ಅಣ್ಣನ ಪ್ರಸಾದ ತಮ್ಮಗಿಲ್ಲ. ಅಳಿಯನ ಪ್ರಸಾದ ಮಾವಗಲ್ಲದೆ ಮಾವನ ಪ್ರಸಾದ ಅಳಿಯನಿಗಿಲ್ಲ. ತಂಗಿಯ ಪ್ರಸಾದ ಅಕ್ಕಗಲ್ಲದೆ ಅಕ್ಕನ ಪ್ರಸಾದ ತಂಗಿಗಿಲ್ಲ. ಹೆಂಡತಿಯ ಪ್ರಸಾದ ಗಂಡಗಲ್ಲದೆ ಗಂಡನ ಪ್ರಸಾದ ಹೆಂಡತಿಗಿಲ್ಲ. ಮಗನ ಪ್ರಸಾದ ತಂದೆಗಲ್ಲದೆ ತಂದೆಯ ಪ್ರಸಾದ ಮಗನಿಗಿಲ್ಲ. ಹೊಲೆಯನ ಪ್ರಸಾದ ಶೀಲವಂತಗಲ್ಲದೆ ಶೀಲವಂತನ ಪ್ರಸಾದ ಹೊಲೆಯನಿಗಿಲ್ಲ. ಇಂತಪ್ಪ ಪ್ರಸಾದದ ಭೇದವ ಬಲ್ಲರೆ ಪ್ರಾಣಲಿಂಗಿ ಪ್ರಸಾದಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತುಡುಗುವ್ಯಾಪಾರದವರಿಗೆ, ಶೀಲವಂತರಿಗೆ ಕಾಷ*ಲೋಹದ ಪಡಿಯಲ್ಲದೆ ಬಣ್ಣದ ಪಡಿಯ ಕೊಡರು. ಅಧಮ, ಅಂಧಕ, ಹೆಳವರಾದ ಹೊಲೆಮಾದಿಗರಿಗೆ ಬಣ್ಣದ ಪಡಿಯ ಕೊಟ್ಟು ಕಾಯಕವ ಮಾಡುತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ