ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಣ್ಣೆ ಕೆಚ್ಚಲ ನುಂಗಿ, ಕಣ್ಣು ತಲೆಯ ನುಂಗಿ, ತುದಿ ಬೇರಿನಲ್ಲಿ ಅಡಗಿತ್ತು. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಅಡಗಿತ್ತು.
--------------
ಬಿಬ್ಬಿ ಬಾಚಯ್ಯ
ಬಾರದವನುಂಡು ಬಂದವ ಹಸಿದಿದ್ದ. ಬೇಯದದು ಬೆಂದು, ಬೆಂದದು ಬೇಯದೆ ಉಭಯವ ಹಿಂಗಿದಂದು ಸಂದು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
--------------
ಬಿಬ್ಬಿ ಬಾಚಯ್ಯ
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ? ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ? ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ? ಇಂತೀ ಭೇದದಲ್ಲಿ ಭೇದಕನಾಗಿ ಎರಡಳಿದು ವೇದ್ಥಿಸಿ ನಿಂದಲ್ಲಿಯೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ
ಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಭಕ್ತಿ ಸಾಧ್ಯವಾಯಿತ್ತು. ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಜ್ಞಾನ ಸಾಧ್ಯವಾಯಿತ್ತು. ಪ್ರಭುದೇವರ ಪ್ರಸಾದವ ಕೊಂಡ ಕಾರಣ ಎನಗೆ ವೈರಾಗ್ಯ ಸಾಧ್ಯವಾಯಿತ್ತು. ಇಂತೀ ಮೂವರು ಒಂದೊಂದು ಕೊಟ್ಟ ಕಾರಣ ಎನಗೆ ಸರ್ವವೂ ಸಾಧ್ಯವಾಯಿತ್ತು. ಏಣಾಂಕಧರ ಸೋಮೇಶ್ವರಾ, ನಿಮ್ಮ ಶರಣರೆನ್ನ ಮಾತಾಪಿತರು.
--------------
ಬಿಬ್ಬಿ ಬಾಚಯ್ಯ
ಬೆಳಗಿನ ಘಟವ ತಮದ ಕುಡಿಕೆ ನುಂಗಿತ್ತು. ಉಭಯದ ಘಟವ ಕೊಡಗೂಸಿನ ಕೂಸೊಡೆಯಿತ್ತು, ಏಣಾಂಕಧರ ಸೋಮೇಶ್ವರಲಿಂಗವನರಿತು.
--------------
ಬಿಬ್ಬಿ ಬಾಚಯ್ಯ
ಬಲುಗಜಕ್ಕೆ ಬಾದಳದಲ್ಲಿ ಹಾದಿಯುಂಟೆ ? ವಿಕ್ರಮಪಕ್ಷಿ ಕಲ್ಲಿಗೆ ಸಿಕ್ಕುವುದುಂಟೆ ? ಬಲ್ಲವನೆಲ್ಲರಿಗೆ ಲಲ್ಲೆಯ ನುಡಿವನೆ ? ಬಲ್ಲವನ ಇರವು ಛಲ್ಲಿಯ ರೂಹಿನಂತೆ. ಇದ ಬಲ್ಲವರಾರೊ, ಏಣಾಂಕಧರ ಸೋಮೇಶ್ವರಲಿಂಗವ.
--------------
ಬಿಬ್ಬಿ ಬಾಚಯ್ಯ
ಬಿಲದೊಳಗಣ ಇಲಿ, ಹುತ್ತದೊಳಗಣ ಹಾವು ಇತ್ತಂಡ ಕೂಡಿ ಮನೆಯೊಳಗಣ ಬೆಕ್ಕ ಮುರಿ ತಿಂದವು. ಮಿಕ್ಕಡಗ ನರಿ ತಿಂದು, ನಾಯಿಗೆ ಸಿಕ್ಕದೆ ಹೋಯಿತ್ತು. ಎತ್ತಲೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗ ತಾನೆ ಬಲ್ಲ.
--------------
ಬಿಬ್ಬಿ ಬಾಚಯ್ಯ