ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಟುಭಟಂಗೆ ಪ್ರಳಯ ಒಂದೆಯೆಂದು ಪ್ರಮಾಣಿಸಿದಲ್ಲಿ ಅಂಗದಾಸೆ ಮರೆಯಿತ್ತು. ಸರ್ವಗುಣಸಂಪದ ಭೇದವ ಒಂದುಮಾಡಿ ದ್ವಯಗುಣವ ಹಿಂಗಿದಲ್ಲಿ ಸ್ಥಲ ಅಲ್ಲಿಯೇ ಲೇಪವಾಯಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಪೃಥ್ವಿಯೆಂಬ ಅಂಗದ ಧರೆಯಲ್ಲಿ ಅಪ್ಪುವೆಂಬ ಅಸು ಹರಿವುತ್ತಿರಲಾಗಿ ಬಹುಚಿತ್ತವೆಂಬ ಜನರು ನೆರೆದು ಅರುವೆಂಬ ಹರುಗೋಲು ಕೆಟ್ಟಿದೆ. ಕುರುಹಿನ ಜಲ್ಲೆಯ ಹಿಡಿದು ಒತ್ತುವರಿಲ್ಲದೆ ತಡಿಯಲ್ಲಿ ಕೂಗುತ್ತೈದಾರೆ ಏಣಾಂಕಧರ ಸೋಮೇಶ್ವರಲಿಂಗವನರಿಯದೆ.
--------------
ಬಿಬ್ಬಿ ಬಾಚಯ್ಯ
ಪೂಜೆಯ ಮಾಡಿದಲ್ಲಿ ಪುಣ್ಯ ನಾಸ್ತಿ. ನಾನಾ ವಿಚಾರವನರಿದಲ್ಲಿ ಭವಂ ನಾಸ್ತಿ. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ನಾನೆಂಬುದನರಿತಲ್ಲಿ, ತಾ ನಾಸ್ತಿಯಾಯಿತ್ತು.
--------------
ಬಿಬ್ಬಿ ಬಾಚಯ್ಯ