ಅ ಪದದಿಂದ ಪ್ರಾರಂಭವಾಗುವ ವಚನಗಳು:
ಅಂಗಕ್ಕೆ ಲಿಂಗ ಸಂಬಂಧ. ಆತ್ಮಂಗೆ ಅರಿವು ಸಂಬಂಧ.ಅರಿವಿಂಗೆ ನಿಶ್ಚಯ ಸಂಬಂಧ. ನಿಶ್ಚಯ ನಿಜದಲ್ಲಿ ನಿಂದಲ್ಲಿಇಷ್ಟಲಿಂಗದ ತೃಷೆ ಅಡಗಿತ್ತು,ಏಣಾಂಕಧರ ಸೋಮೇಶ್ವರಲಿಂಗವನರಿಯಲಾಗಿ.
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂಬ ಸಂದೇಹವೆಂತುಟೊ ?ಜೀವನವ ಹಿಂಗಿದ ಘಟ ಜೀವಿಸಬಲ್ಲುದೆ ?ಭಾವಕ್ಕೆ ಇದಿರಿಟ್ಟು, ಕುರುಹು ಅಭಿಮುಖವಾಗಿ ಅರಿವುದಕ್ಕೆ ತೆರನಿಲ್ಲ,ಏಣಾಂಕಧರ ಸೋಮೇಶ್ವರಲಿಂಗ ತಾನಾಗಿ.
ಅರಿದು ಅರುಹಿಸಿಕೊಂಬುದಾದ ಕಾರಣಉಭಯನಾಮವಾಯಿತ್ತು.ಅದರ ಭೇದದಿಂದ ತಿಳಿಯೆ ಮೂರಾಯಿತ್ತು.ಮೂರು ಮುಮ್ಮೊಖದಲ್ಲಿ ತಿಳಿಯೆ ಆರಾಯಿತ್ತು.ಇವೆಲ್ಲವು ಒಡಗೂಡಿ ನೋಡೆ ನೂರೊಂದಾಯಿತ್ತು.ಭಿನ್ನಭಾವಿಯ ಭೇದದಿಂದಸೂತ್ರದ ದಾರ ನಾಳವೊಂದರಲ್ಲಿ ಅಡಗಿಪ್ಪಂತೆಸ್ಥಲ ಕುಳಂಗಳು ವಸ್ತುವಿನಲ್ಲಿ ಅಡಗಿ ತೋರುವವು,ಏಣಾಂಕಧರ ಸೋಮೇಶ್ವರಲಿಂಗದಲ್ಲಿಉಭಯನಾಮ ನಷ್ಟವಾದವಂಗೆ.
ಅಂಗಲಿಂಗ ಸಂಬಂಧವಾದಡೆವೇದನೆ ಅಂಗದ ನೋವಿನಂತಿರಬೇಕು.ಹೇಮದಂಗ ಅಗ್ನಿಯ ಸಂಗದಲ್ಲಿದ್ದುರೂಪಳಿದು ನೀರಾದಂತೆ, ಅಂಗಲಿಂಗಸಂಬಂಧ,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಅಗ್ನಿ ಲೋಹದಂತೆ, ಫಲ ರಸದಂತೆಕಾಯ ಜೀವದ ಪರಿಯಂತೆ, ಅಂಗ ನೆಳಲಿನಂತೆಅಂಗಲಿಂಗಸಂಬಂಧವಾಗಬೇಕು,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.