ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಕ್ತಿ ಎನಲಾ ಮಹಾಲಿಂಗದೊಳಗುಷ್ಣದಂತವಿರಳಮಾದ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿಚ್ಛಕ್ತಿಗಳೆಂಬಿವು ಮುಖಮೆನೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯಮೆಂಬೀ ಮುಖಂಗಳಲ್ಲಿ ಪೂರ್ವೋಕ್ತ ಷಡ್ಲಿಂಗಾಕಾರದಿಂದಿರ್ಪೆಯಯ್ಯಾ, ಪರಮ ಶಿವಲಿಂಗ ಷಟ್ವಾಮ್ನಾಯ ಪ್ರಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಶ್ವೇತಂ ರಕ್ತಂ, ನೀಲಂ ಕುಂಕುಮಂ. ಪೀತಂ ಅಂಜನಮಿಂತಿವು ತರದಿಂ ಕೂಟಾಂಗವರ್ಣವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಶ್ರೀಮತ್ಸ ್ವಸ್ತಿ ಸಮಸ್ತ ಭುವನಭವನಾರಂಭ ಮೂಲಸ್ತಂಭಾಯಮಾನ ಸಕಲ ಜಗದುಪಾದಾನಕಾರಣ ಮಾಯಾತರಂಗ ಸಮುದ್ರಾಯಮಾನ ಮಾಹನೀಯ ಮುಖ್ಯ ಹಂ ಪ್ರಕಾಶ ಶರೀರ ಭೂತಜಗನ್ನಿಚಯ ಲೀಲಾಸೂತ್ರಧಾರಿ ಶರಣಭವ ಶಾಶ್ವತ ಕೃಪಾಕರ ಶಂಕರ ಶಿವಲಿಂಗ ಲಿಂಗತ್ರಯಾಂತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ