ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂರ್ವೋಕ್ತ ಸಕಾರವುಂ ಸ್ವರಾಂತ ವಿಸರ್ಗದೊಡನೆ ಕೂಡಿಸೆ ಸಃ ಎಂಬಾರನೆಯ ಶಕ್ತಿಬೀಜವಾದುದಿಂತು ಸಾಂ ಸೀಂ ಸೂಂ ಸೈಂ ಸೌಂ ಸಃ ಎಂಬೀ ಶಕ್ತಿಬೀಜಂ ವೇದದಲ್ಲಿ ಶಿವಾಂಗದಂತೆ ಸ್ರಾಂ ಸ್ರೀಂ ಸ್ರೂಂ ಸ್ರೆ ೈಂ ಸ್ರೌಂ ಸ್ರಃ ಎಂದಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪುನರಪಿ ಐಕ್ಯಸ್ಥಲಮೆ, ಐಕ್ಯಸ್ಥಲ ಸರ್ವಾಚಾರಸಂಪತ್ತುಸ್ಥಲೇಕಭಾಜನಸ್ಥಲ ಸಹಭೋಜನಸ್ಥಲಂಗಳೆಂದು ನಾಲ್ದೆರನಾಯಿತು ನಿರಂಜನ ಪರಂಜ್ಯೋತಿಸ್ವರೂಪ, ಪರಮ ಶಿವಲಿಂಗೇಶ್ವರ ಸದ್ಗುಣಕಲಾಪಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪೂರ್ವಿವಾದಿಯಾಗಿ ಮಂಡಲತ್ರಯದೊಳ್ಮೊದಲಗ್ನಿ ಮಂಡಲದೀಶಾನಂ ತೊಡಗಿ ಸ ಷ ಶ ವ ಲ ರ ಯ ಮ ಗಳೆಂಬ ವ್ಯಾಪಕಾಕ್ಷರಂಗಳೆಂಟೆ ಸಳಳೊಳಿರ್ಪವಾ ಹಕಾರವೆ ಶಿವಬೀಜವಾದಕಾರಣವಾ ಚಕ್ರದ ಕರ್ಣಿಕಾಕ್ಷಾರವೆನಿಸಿತ್ತು. ಳಕಾರಮೆ `ಲಳಯೋರ್ಭೇದಃ' ಎಂದು ಲಳಂಗಳ್ಗೆ ಭೇದಮಿಲ್ಲಮದರಿಂ ಳಕಾರಂ ಲಕಾರದೊಳಂತರ್ಭಾವಮಾದುದುಮಲ್ಲದೆಯು ಮಾತ್ಮಬೀಜವಾದ ಳಕಾರಂ ಕರ್ಣಿಕಾದಳಂ ನ್ಯಸ್ತಾತ್ಮಬೀಜವಾದ ಕಾರಣದೊಳ್ಪುದಿದಿರ್ಪುದಿಂತು ಕರ್ಣಿಕಾಗ್ನಿಮಂಡಲನ್ಯಸ್ತ ದಶವ್ಯಾಪಕಾಕ್ಷರಂಗಳಂ ಪೇಳ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಪಟುವೇದಾಂತ ಭಾಸ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ