ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರಯೋದಶ ನಾಮಕ್ಕೆ ವಿವರವೆಂತೆನೆ- ಸೂಕ್ಷ ್ಮವಾಗಿ ಘೋಷಮಮಯವಾದುದರಿಂ ನಾದಂ. ಚರಾಚರಾದಿ ಜೀವ ಹೃದಯಸ್ಥ ಚೈತನ್ಯಮಪ್ಪುದರಿಂ ಗುಹ್ಯ, ಮೂರ್ತಿ[ಯ]ದತ್ತಣಿನುತ್ತೀರ್ಣಮಾದುದರಿಂದ ಪರ ಮಿನ್ನೊಂದು ತೆರದಿಂ ಸ್ಥೂಲ ಸೂಕ್ಷ ್ಮ ಪರಮೆಂದು ಮೂದೆರ- ನದರೊಳ್ವ ಎಂಬ ಶಬ್ದಂ ಸ್ಥೂಲಂ ಚಿಂತಾಮಯಂ ಸೂಕ್ಷ ್ಮಂ ಶಬ್ದಂ ಚಿಂತಾರಹಿತತೆಯೆ ಪರಂ ಜೀವವೆಂದು ಕಲ್ಪಿತ ಚಿತ್ತಾದ್ವೈತನಾದ ಶಿವಂ ಜೀವತ್ವವನಂಗೀಕರಿಸದಿರ್ದೊಡೆ ಪ್ರಪಂಚವೇನುವಿಲ್ಲವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಭಾಮಯ ಕಳೇವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ತತ್ವಾಂಗ ಕರ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ ದ್ರವ್ಯ ಭಕ್ತಿ ಮಂತ್ರಂಗಳೆಂಬಿವೊಂದೊಂದಾರಾಗಲೊಡನರುವತ್ತಾರುದೆರ- ದರ್ಪಣಮಾದುದೆಲ್ಲಂ ನಿನ್ನ ಚಿತ್ಕಿರಣ ಕೀರ್ಣಮಯಮಯ್ಯಾ, ಪರಮ ಶಿವಲಿಂಗ ಪಯೋನಿಧಿ ನಿಷಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ತತ್ವೋಂಗ ಹಸ್ತ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ ದ್ರವ್ಯ ಮಂತ್ರ ಭಕ್ತಿಗಳೆಂಬೀ ಏಕಾದಶ ಸಕೀಲಂಗಳಂ ಗಣಿಸಲೊಡನರುವತ್ತಾರಾದವವ- ನೊಂದೊಂದರೊಳಂ ಬೆರಸೆ ಮುನ್ನೂರ[ತೊಂಬ]ತ್ತಾರಾದುದೆಲ್ಲಂ ಸ್ವಪ್ರಕಾಶ ರೂಪವಯ್ಯಾ, ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ