ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿಪ್ರಸಾದ, ಮುಕ್ತಿಪ್ರಸಾದ, ಇರಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು. ತಾವರಿಯದ ವಿವರ ತಮಗೆಲ್ಲಿಯದೊ ? ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ ಮತ್ತಾರನೂ ಕಾಣೆನಯ್ಯಾ.
--------------
ನೀಲಮ್ಮ
ಭಕ್ತಿಯಿಲ್ಲದ ಕಿಂಕುರ್ವಾಣವ ಮಾಡಹೋದರೆ ಆ ಭಕ್ತಿ ಗಹಗಹಿಸಿ ನಕ್ಕಿತ್ತು. ಕಿಂಕುರ್ವಾಣವಿಲ್ಲದಿದ್ದರೆ ಜ್ಞಾನವಿಲ್ಲದಾಯಿತ್ತು. ಆ ಜ್ಞಾನ ಜ್ಞಾನಕ್ಕೆ ಸುಯಿದಾನವೈದಲು ಭಕ್ತಿನೆಲೆಯಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಭೃತ್ಯಾಚಾರವಳಿಯ ಭೃತ್ಯವನನುಭವಿಸಿದೆನು. ಅಪ್ರತಿಮಲಿಂಗ ನಿಜಾನಂದ ಸುಖವ ಕಂಡು ಸುಯಿದಾನಿಯಾನಾದೆನಯ್ಯ, ಎಲೆಯಯ್ಯ ಏನೆಂದೆನ್ನೆ ನಿಮ್ಮ ಮಹದ ಆಯತವ ? ಮಹದನುಭವವ ಕಂಡು ಸುಖಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಭಾವವಿಲ್ಲದ ರೂಪೆ ರೂಪಿಲ್ಲದೆ ಅಡಗಿದೆ. ನಿಯಮವಿಲ್ಲದ ಕಳೆಯೆ ಕಳೆಯಿಲ್ಲದೆ ಅಡಗಿದೆ. ಕಾಯವಿಲ್ಲದ ಸುಖವೆ ಸುಖವಿಲ್ಲದೆ ಅಡಗಿದೆ. ಕರಣಂಗಳ ಸಂಗವನಳಿದು ಕರ್ಮದ ಮಾಟಕೂಟವ ಕಳೆದು ಕಲ್ಪಿತನಷ್ಟವಾಗಿ ಬಸವಾ ಬಸವಾ ಬಸವಾ ಎಂಬ ಶಬ್ದ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ.
--------------
ನೀಲಮ್ಮ