Some error occurred
ಅಥವಾ

ಒಟ್ಟು 94 ಕಡೆಗಳಲ್ಲಿ , 39 ವಚನಕಾರರು , 93 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Created with Highcharts 3.0.6Chart context menuಪದವಿರುವ ವಚನಗಳುವಚನಕಾರರು1156143112115122121141114114113181112141ಒಟ್ಟು10ಅಕ್ಕಮಹಾದೇವಿ28ಅಕ್ಕಮ್ಮ37ಅಂಬಿಗರಚೌಡಯ್ಯ18ಅರಿವಿನಮಾರಿತಂದೆ3ಅಲ್ಲಮಪ್ರಭುದೇವರು55ಅವಸರದರೇಕಣ್ಣ14ಏಲೇಶ್ವರಕೇತಯ್ಯ101ಒಕ್ಕಲಿಗಮುದ್ದಣ್ಣ150ಕೂಗಿನಮಾರಯ್ಯ 16ಗುಪ್ತಮಂಚಣ್ಣ 6ಗುಹೇಶ್ವರಯ್ಯ 134ಗೊಗ್ಗವ್ವೆ 7ಚನ್ನಬಸವಣ್ಣ83ಡಕ್ಕೆಯಬೊಮ್ಮಣ್ಣ 46ತುರುಗಾಹಿರಾಮಣ್ಣ 27ದಾಸೋಹದಸಂಗಣ್ಣ 9ನಗೆಯಮಾರಿತಂದೆ112ಪ್ರಸಾದಿಭೋಗಣ್ಣ 128ಬಾಲಸಂಗಣ್ಣ 51ಬಾಹೂರಬೊಮ್ಮಣ್ಣ 81ಬಿಬ್ಬಿಬಾಚಯ್ಯ74ಭರಿತಾರ್ಪಣದಚೆನ್ನಬಸವಣ್ಣ 79ಭೋಗಣ್ಣ 13ಮಧುವಯ್ಯ49ಮನಸಂದಮಾರಿತಂದೆ 67ಮನುಮುನಿಗುಮ್ಮಟದೇವ118ಮಾದಾರಚೆನ್ನಯ್ಯ 8ಮಾದಾರಧೂಳಯ್ಯ 124ಮಾರೇಶ್ವರೊಡೆಯರು 23ಮೆರೆಮಿಂಡಯ್ಯ29ಮೋಳಿಗೆಮಹಾದೇವಿ 19ಮೋಳಿಗೆಮಾರಯ್ಯ 119ವೀರಗೊಲ್ಲಾಳ/ಕಾಟಕೋಟ 63ವೈದ್ಯಸಂಗಣ್ಣ 25ಷಣ್ಮುಖಸ್ವಾಮಿ40ಸಗರದಬೊಮ್ಮಣ್ಣ 236ಸಿದ್ಧಾಂತಿವೀರಸಂಗಯ್ಯ 71ಸುಂಕದಬಂಕಣ್ಣ 12ಹಡಪದಅಪ್ಪಣ್ಣ 01020
ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ? ಅಂದಿಗೆ ಜಾÕನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
--------------
ಅವಸರದ ರೇಕಣ್ಣ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯಗುಣ. ಬೇಕೆಂಬುದು ಇನಿತಿಲ್ಲ; ಬೇಡೆಂಬುದು ಇನಿತಿಲ್ಲ. ಈ ಉಭಯವ ಅತಿಗಳೆದು ಭೋಗಿಸಬಲ್ಲಡೆ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣನೆಂಬೆ
--------------
ಚನ್ನಬಸವಣ್ಣ
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಬ್ಥೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಒಕ್ಕಲಿಗ ಮುದ್ದಣ್ಣ
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು. ಇಲ್ಲದುದ ಇದ್ದುದೆಂದು ನೋಡಲಿಕಾಗಿ, ಇದ್ದಲ್ಲಿಯೆ ತಲ್ಲೀಯವಾಯಿತ್ತು ಇಂತು ಉಭಯವ ಕಡೆಗಾಣಿಸಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
--------------
ಮೋಳಿಗೆ ಮಾರಯ್ಯ
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ, ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ, ಉಭಯವ ಕಡೆಗಾಣಿಸಿ ನಿಂದಲ್ಲಿ ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ.
--------------
ಅರಿವಿನ ಮಾರಿತಂದೆ
ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ, ಫಲದ ಮರಯ ರಸವ ಹಿಳಿದು ಕಾಬ ಸವಿವ ರುಚಿಯಂತೆ, ತೆರೆಯ ಮರೆಯ ರೂಪ ತೆಗೆದು ಕಾಬ ಸುಖದಂತೆ, ಇಷ್ಟದ ಮರೆಯಲ್ಲಿದ್ದ ದೃಷ್ಟವ, ಉಭಯವ ನಿಶ್ಚಿಯಿಸಿದಲ್ಲಿ ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ. ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ. ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು. ರೂಪು ರುಚಿ ದೃಷ್ಟವಾಗಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಹಾವ ಕೊಂದು ತಿಂದ ಹದ, ತಾ ತಿಂದಡೆ, ಸ್ವಾನುಭಾವಜ್ಞಾನಿ. ಹುಲಿಯ ಕೊಂದ ನಾಯ ಕೊಲ್ಲದೆ ತಂದಡೆ, ಆತ ಪರಂಜ್ಯೋತಿ ಪ್ರಕಾಶ. ಇಂತೀ ಹಾವಿನ ಹಗೆ, ಹುಲಿಯ ವಿರೋಧ. ಇಂತೀ ಉಭಯವ ತಿಂದವನ ತಿಂದು, ವಿಚ್ಛಂದವಿಲ್ಲದೆ ಬದುಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಮಹಾಜ್ಞಾನ ದಿವ್ಯಪರಿಪೂರ್ಣವಸ್ತು ಜಗಹಿತಾರ್ಥವಾಗಿ ಸ್ವಯಂಭುವೆಂಬ ಸ್ವರೂಪವ ಬಿಟ್ಟು, ಲೀಲಾಸಂಭವನಾಗಿ ಉಮಾಪತಿಯಾದಲ್ಲಿ, ಪಂಚವಕ್ತ್ರದಿಂದ ಪಂಚಭೂತಿಕಂಗಳು ಕಲ್ಪಿಸುವಲ್ಲಿ, ಕರ್ಮಶಕ್ತಿ ವಿಷ್ಣುರೂಪಾಯಿತ್ತು. ಭಾವಶಕ್ತಿ ಬ್ರಹ್ಮರೂಪಾಯಿತ್ತು. ಜ್ಞಾನಶಕ್ತಿ ರುದ್ರರೂಪಾಯಿತ್ತು. ಈ ಉಭಯವ ಘಟಿಸಿ ನಿಂದಲ್ಲಿ, ಷಡುದರ್ಶನ ಸಂಭವಿಸಿದ ಠಾವಾವುದು ? ಒಂದು ವೃಕ್ಷದಲ್ಲಿ ಹುಟ್ಟಿದ ಫಲ, ಮೊದಲೆ ಎಳದಾಗಿ, ತದನಂತರ ಮೀರಿ ಬಲಿದಲ್ಲದೆ ಬೀಜಾಂಕುರವಿಲ್ಲ. ಮರದಿಂ ಮೀರಿ ತೋರುವ ಅಂಕುರವಿಲ್ಲ. ವಸ್ತುವ ಮೀರುವ ದರ್ಶನವಿಲ್ಲ. ಅಪ್ಪು ಒಂದರಲ್ಲಿ ಹಲವು ಫಲವನನುಭವಿಸುವಂತೆ, ವಸ್ತು ಒಂದರಲ್ಲಿ ಸಕಲ ಕೃತ್ಯವ ಮಾಡಿ, ತನ್ನ ಚಿತ್ತದ ಕಲೆಯ ಹರಿದುಕೊಂಬವಂಗೆ ಅವನೊಳು ತಥ್ಯಮಿಥ್ಯ. ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ಮಾದಾರ ಚೆನ್ನಯ್ಯ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ. ಇಲ್ಲ ಎಂದಡೆ ಸಮಯಕ್ಕೆ ದೂರ, ಉಂಟೆಂದಡೆ ಜ್ಞಾನಕ್ಕೆ ದೂರ. ಉಭಯವ ಸಂಪಾದಿಸುವದಕ್ಕೆ ಎನಗೆ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->
Some error occurred