ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡಾ. ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ ಒಡಲನಿರಿಸುವದೆ ಭಂಗ ನೋಡಯ್ಯಾ. ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ ಚಂದೇಶ್ವರಲಿಂಗವಾದಡೂ ತಪ್ಪನೊಳಕ್ಕೊಳ್ಳ ಕಾಣಾ ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ನಾನೆಂದು ಇಹನ್ನಬರ ಗುರುಪೂಜೆಯ ಮಾಡಬೇಕು. ನಾನೆಂದು ಇಹನ್ನಬರ ಲಿಂಗಪೂಜೆಯ ಮಾಡಬೇಕು. ನಾನೆಂದು ಇಹನ್ನಬರ ಜಂಗಮಪೂಜೆಯ ಮಾಡಬೇಕು. ನಾ ನೀನೆಂಬುಭಯವಳಿಯೆ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಏನೂಎನಲಿಲ್ಲ.
--------------
ನುಲಿಯ ಚಂದಯ್ಯ
ನಾನೆಂಬುದ ಮರೆದಲ್ಲಿ ಗುರುಸ್ಥಲ. ಜಗದ ಆಗುಛೇಗೆಗೆ ಸಿಕ್ಕದಿಪ್ಪುದು ಲಿಂಗಸ್ಥಲ. ತ್ರಿವಿಧದ ಬಟ್ಟೆಗೆ ಬಾರದಿಪ್ಪುದು ಜಂಗಮಸ್ಥಲ. ಅಂಗವರತು, ಮನದ ಪ್ರಕೃತಿ ನಿಂದು, ಗುರು ಲಿಂಗ ಜಂಗಮದ ತ್ರಿವಿಧಾಂಗದದಲ್ಲಿ ನಿಶ್ಚಯವಾದ ಸದ್ಭಕ್ತ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವು ತಾನೆ.
--------------
ನುಲಿಯ ಚಂದಯ್ಯ