ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಂಗ ಸಮನಿಸದಂದು, ಲಿಂಗ ಉತ್ಪತ್ತಿಯಾಗದಂದು ಸಂಗಾ ಬಸವಾಯೆಂಬ ಶಬುದವೆಲ್ಲಿಯದೋ ? ಸಂಗಾ ಬಸವಾಯೆಂಬ ಶಬುದವ ಲಿಂಗಿಗಳೆತ್ತ ಬಲ್ಲರು ? ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆ.
--------------
ಬಹುರೂಪಿ ಚೌಡಯ್ಯ
ಸರದೊಳಗೆ ಸರಗಟ್ಟಿ, ಸರ ಹರಿದವ ನಾನಯ್ಯಾ. ಮಹದೊಳಗೆ ಮನೆಗಟ್ಟಿ, ಮನೆ ಬೆಂದವ ನಾನಯ್ಯಾ. ಕಿಚ್ಚಿನೊಳಗೆ ಕಿಚ್ಚನೊಟ್ಟಿ, ಕಾದವ ನಾನಯ್ಯಾ. ಆ ಕಿಚ್ಚಿನೊಳಗೆ ಬಿದ್ದು ಉರಿದವ ನಾನಯ್ಯ. ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ. ಸೂತ್ರವಾಗಿ ಹೋದೆ ನಾ. ಬಸವಣ್ಣನಿಂದ ಕೆಟ್ಟೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಸಂಗನಬಸವಣ್ಣ ಎನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಗುರುರೂಪಾದನಯ್ಯಾ. ಚನ್ನಬಸವಣ್ಣನೆನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಲಿಂಗರೂಪಾದನಯ್ಯಾ. ಪ್ರಭುದೇವರೆನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಪ್ರಾಣಲಿಂಗವಾದನಯ್ಯಾ. ಇವರು ಮೂವರಿಗೆ ನಾ ಭಕ್ತನಾಗಿ ಹುಟ್ಟಿದೆನಾಗಿ ರೇಕಣ್ಣಪ್ರಿಯ ನಾಗಿನಾಥನೆನಗೆ ಒಚ್ಚತವಾದನಯ್ಯಾ.
--------------
ಬಹುರೂಪಿ ಚೌಡಯ್ಯ