ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು, ನೋಡುವರ ದೃಷ್ಟಿ ಬಟ್ಟಬಯಲು ರೇಕಣ್ಣಪ್ರಿಯ ನಾಗಿನಾಥನಲ್ಲಿ ಆಟವನಾಡಿದ ಅರಿದಾಗಿ.
--------------
ಬಹುರೂಪಿ ಚೌಡಯ್ಯ
ಎಲ್ಲರಾಟದಂತಲ್ಲ ಎನ್ನಾಟ, ಕರದಾಧಾರದಲಪ್ಪಿ, ಪಂಚಾಮೃತ ಮಂತ್ರವನುಂಡಾಡಿದೆ. ಆ ದೇಶ ಈ ದೇಶವೆಂತೆನ್ನದೆ ಪರದೇಶದಲಾಡಿ ಪರದೇಶಿಯಾದೆನು. ಕಾಲನ ಮೇಲೆ ನಿಂದು, ಕಪಾಲದ ಭಿಕ್ಷವ ಹಿಡಿದು ಹರಿಯ ಶೂಲದಲೆತ್ತಿಯಾಡಿದೆ. ಹರಶರಣರಾಧಾರದ ಬಸವನ ಶಿಶು ನಾನು ಕಾಣಾ ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ. ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ ಬಸವಣ್ಣ. ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ ಬಸವಿದೇವ. ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು ಬಸವನಿಂದ. ಎನ್ನ ಗೋತ್ರ ನಿವಾರಣವಾಯಿತ್ತು ಬಸವನಿಂದ. [ವೇಳವಾಳಿ] ನಾ ಹೆಣ್ಣನರ್ಪಿತ ಮಾಡಿದಲ್ಲಿ ಒಪ್ಪುಗೊಂಡಾತ ಬಸವಣ್ಣ. ಕಡುಗಲಿ ತಮ್ಮನನಿರಿಯಲು ಮುರಿಯಿತ್ತು ಅಲಗು ಬಸವನಿಂದ. ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು ಏಳಲಾರದೆ ಹೋದರು ಬಸವನಿಂದ. ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಎಲ್ಲಾ ಜಗಂಗಳೊಳಗಿರ್ದಡೇನು ಶಿವನು ಜಗದಂತಹನಲ್ಲ. ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದಡೆ ಬ್ರಹ್ಮಾಂಡದಂತಹನೇ ? ಅಲ್ಲ. ಆಕಾಶದೋಪಾದಿಯಲ್ಲಿ ಸರ್ವಲೋಕದ ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ ನಮ್ಮ ರೇಕಣ್ಣಪ್ರಿಯ ನಾಗಿನಾಥ
--------------
ಬಹುರೂಪಿ ಚೌಡಯ್ಯ
ಎಂಬತ್ತುನಾಲ್ಕುಲಕ್ಷ ಬಹುರೂಪ ಚಂದ ಚಂದದಲ್ಲಿ ಆಡಿ ಬಂಧುಗಳ ಮೆಚ್ಚಿಸಬಂದೆ. ಅವರು ಬಹುರೂಪದಂದವನರಿಯರು. ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಹುರೂಪದಿಂದ ವಿಚ್ಫಂದವಾಯಿತ್ತು.
--------------
ಬಹುರೂಪಿ ಚೌಡಯ್ಯ