ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶುದ್ಧವೆ ಜವನಿಕೆಯಾಗಿ, ಸಿದ್ಧವೆ ಸಿಂಹಾಸನವಾಗಿ ಪ್ರಸಿದ್ಧದ ಹೊದಿಕೆಯ ಹೊದ್ದು, ನಾನಾಡುತ್ತಿರ್ದೆ ಬಹುರೂಪ. ಶುದ್ಧ ಓಡಿದಲ್ಲಿ, ಇದ್ದ ನಿಜ ನಾಸ್ತಿಯಾಯಿತ್ತೆನ್ನ ಬಹುರೂಪು. ಸಿದ್ಧವೆಂಬ ಸಿಂಹಾಸನ ಅಳಿದಲ್ಲಿ ಬುದ್ಧಿಗೆಟ್ಟಾಡುತ್ತಿದ್ದುದಯ್ಯಾ, ಎನ್ನ ಬಹುರೂಪು. ಪ್ರಸಿದ್ಧ ಹೊದಿಕೆ ಹರಿದಲ್ಲಿ ನಾ ಬಸವನ ಕೂಡೆ ಆಡುತ್ತಿರ್ದೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಶೂನ್ಯ ಸನ್ನಹಿತವಾದಲ್ಲಿ ಶೂನ್ಯ ಪದಾರ್ಥವಾದಲ್ಲಿ, ಶೂನ್ಯ ಪ್ರಸಾದವಾದಲ್ಲಿ ಅದು ಬಸವಣ್ಣನ ಪ್ರಸಾದವೆಂದು ಆನು ಬಸವಣ್ಣನ ಕೂಡೆ ಆಡುತಿರ್ದೆನು. ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆನು.
--------------
ಬಹುರೂಪಿ ಚೌಡಯ್ಯ