ಅಥವಾ
(0) (0) (0) (0) (0) (1) (0) (0) (0) (0) (1) (0) (0) (0) ಅಂ (0) ಅಃ (0) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (1) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಗಳು ನುಂಗಿದ ಬಯಲವ, ಕರ್ಣ ಅವಗವಿಸಿದ ನಾದವ, ನಾಸಿಕದಲ್ಲಿ ನಷ್ಟವಾದ ಸುಗಂಧವ, ಜಿಹ್ವೆಯ ಕೊನೆಯಲ್ಲಿ ಅಳಿದ ರಸಾನ್ನವ, ಮುಟ್ಟಿನ ದೆಸೆಯಲ್ಲಿ ನಿಶ್ಚಯವಾದ ಮೃದು ಕಠಿಣಾದಿ, ಇಂತಿವೆಲ್ಲವೂ ನಿಜನೆಲೆಯಲ್ಲಿ ಅಚ್ಚೊತ್ತಿದಂತೆ ಐಕ್ಯವಾದ ಮತ್ತೆ ಅರ್ಪಿತವೆಂಬುದು ಹಿಂಚೋ, ಮುಂಚೋ ಎಂಬುದ ತಿಳಿದು, ಆ ಉಳುಮೆಯಲ್ಲಿ ಕಲೆದೋರದೆ ಅರ್ಪಿತ ನಷ್ಟವಾದುದು. ಕಮಠೇಶ್ವರಲಿಂಗವ ಕೂಡಿ ಕೂಡಿದೆನೆಂದು ಎರಡಳಿದ, ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದೇಹವಳಿದ ಶರಣ.
--------------
ಬಾಲಸಂಗಣ್ಣ
ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ. ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ. ಸುಖವನನುಭವಿಸುವವು ಇಂದ್ರಿಯಂಗಳಲ್ಲ. ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು ಬೇರೋ, ಮರನೋ ? ಮೀರಿ ಬೆಳೆದ ಫಲವೋ ? ಎಂಬುದನರಿದು ತಿಳಿದಲ್ಲಿ, ಅರಿದರುಹಿಸಿಕೊಂಬ ನಿರಿಗೆಯ ಬಲ್ಲ, ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.
--------------
ಬಾಲಸಂಗಣ್ಣ