ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (3) (0) (0) (0) (0) (1) (0) (0) (0) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದು ತಮ್ಮ ಕ್ಷುತ್ತುವ ಕೊಂಬಂತೆ ಮತ್ರ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ? ಬಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂ ಸಿಕ್ಕಿದರೇಕೆ ಮಾಯೆಗೆ? ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವ ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ? ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ? ಖ್ಯಾತಿಯ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ? ಇಂತಿವನರಿದು ಮಾಡುವ ಭಕ್ತರು ಆಪ್ಯಾಯನಕ್ಕೆ ಅನ್ನ ಅಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು ಈ ತ್ರಿವಧಕುಚಿತವೆಂದವರನರಿಯಬೇಕು. ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಹಾದರವನಾಡುವನೆ ಸದ್ಭಕ್ತ? ಹಾದಿಯ ಕಟ್ಟುವನೆ ನಿಜಶರಣ? ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ? ಇಂತಿವರ ನೀ ಬಲ್ಲೆ, ನಾನರಿಯೆ ಕಾಮದಹನಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಹಾದರ ಹಸುಗೊಲೆ ವಿಷಯಂಗಳಲ್ಲಿ ಆದರಿಸಬೇಕು. ಬಲ್ಲವರಲ್ಲಿದ್ದು ಸಾಧನೆಯಾಯಿತ್ತು. ಎಲ್ಲರೂ ಕಲಿತ ಕಲಿಕೆಯಲ್ಲಿ ಇದನು ಭೇದಿಸಲರಿಯೆ ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ