ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎತ್ತಾಗಿದ್ದು ಹೆಗಲ ಕೊಡೆನೆಂದಡೆ ನಿಶ್ಚಯವೆ?ತೊತ್ತಾಗಿದ್ದು ಹೇಳಿದುದ ಕೇಳೆನೆಂದಡೆ ಮೆಚ್ಚುವರೆ?ಭಕ್ತನಾಗಿದ್ದು ಭಾರಣೆಯನಾದರಿಸದಿದ್ದಡೆ ಅದು ಅಚ್ಚಿಗವೆಂದೆ,ಕಾಮಹರಪ್ರಿಯ ರಾಮನಾಥ.