ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (3) (0) (0) (0) (0) (1) (0) (0) (0) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನೆಯನೊಪ್ಪಿಸಿ ಕೊಟ್ಟುವಂಗೆ ಹಿಂದೆಸೆಯ ಹಂಗೇಕೆ? ಮಾಡಿಹೆನೆಂಬ ಮಾಟವುಳ್ಳವಂಗೆ ಅವರಿವರಾಡಿಹರೆಂಬ ಸಂದೇಹವೇಕೆ? ಗುಡಿಯ ಕಟ್ಟಿದ ಮತ್ತೆ ಹಡಹಲ್ಲದೆ ಅವರಡಿಯನರಸಲೇಕೆ? ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಮೂರ ಮುದುಡಿಸಿ ಆರನಡಗಿಸಿ ಎಂಟ ಗಂಟಿಕ್ಕಿ ನಾಲ್ಕು ಸೆರಗ ಹಾಸಿ ಎರಡರಲ್ಲಿ ಬಂಧಿಸಿ ಒಂದುಗೂಡಿ ಮಂಡೆಯ ಮೇಲೆತ್ತಿದವಂಗೆ ಮತ್ತೆ ಅವು ಹಿಂಗುವ ಠಾವಿಲ್ಲ, ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಮನವನೊಪ್ಪಿಸುವ ಠಾವಿನಲ್ಲಿ ಹೆಣ್ಣ ಬೇಡಿದಡೆ ನೋಯಲೇಕೆ? ಧನವನೊಪ್ಪಿಸುವ ಠಾವಿನಲ್ಲಿ ನಿಷು*ರ ಬಂದಡೆ ತಾಳಬೇಕು. ತನುವನೊಪ್ಪಿಸುವ ಠಾವಿನಲ್ಲಿ ಅಸಿಯಲ್ಲಿ ಕುಸಿಕಿರಿದಡೆ ಹುಸಿಯೆನ್ನದಿರ್ದಡೆ ಇವೆಲ್ಲವೂ ಕಸರಜದ ಗುಣ, ಭಕ್ತಿಯ ಸತ್ವದ ನಿತ್ಯತ್ವವಿಲ್ಲೆಂದೆ, ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ