ಅಥವಾ

ಒಟ್ಟು 132 ಕಡೆಗಳಲ್ಲಿ , 16 ವಚನಕಾರರು , 86 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟ್ಟುಂಬುವುದದು ಜೀವಕ್ಕೆ ಪ್ರಸಾದವಲ್ಲದೆ ನಿರ್ಜೀವಕ್ಕೇನೊ ಅಯ್ಯಾ? ಜೀವಭಾವವಳಿದು, ಜನನಭಾವವಡಗಿ, ಜಗದಂತರ್ಯಾಮಿಯೆಂಬುದು ಮಹಾಪ್ರಸಾದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ ರೂಪು ಹೊಲೆಯನಾಗಬಲ್ಲುದೆ ಅಯ್ಯಾ? ಮತ್ರ್ಯಲೋಕದ ಮಾನವರೊಳಗೆ ಶರಣ ಸುಳಿದಡೆ ಶರಣ ಸೂತಕಿಯಾಗಬಲ್ಲನೆ ಅಯ್ಯಾ? ಮತ್ರ್ಯರ ಭವಿಯ ಮಾತ ವರ್ತಮಾನವೆಂಬ ಜೀವಿಗಳ ಆಗೆದೊಗೆಯದೆ ಮಾಬನೆ ಮಹಾಲಿಂಗ ಗಜೇಶ್ವರಯ್ಯ
--------------
ಗಜೇಶ ಮಸಣಯ್ಯ
ಬೇಡಿ ಉಂಡವ ಬೇಡದುದ ಬೇಡನೆ ಅಯ್ಯಾ? ಬೇಡಲಾರದವ ಬೇಡದುದ ಬೇಡನಯ್ಯಾ. ಕಾಡಿದ ಜಂಗಮ ಈಡಾಡಿದನಯ್ಯಾ ಭಕ್ತನ. ಬೇಡದ ಜಂಗಮ ಭಕ್ತನ ಕೂಡಿಕೊಂಡ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಿರಣ್ಯಚ್ಛೆಯ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ? ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು. ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು. ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ, ಸ್ವಾನುಭಾವದೀಕ್ಷೆ ಸಮನಿಸಿದವರು. ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ. ಮಸ್ತಕದಲ್ಲಿ ಪೂಜೆಯ ಮಾಡಿ ಅದ ನಿರ್ಮಾಲ್ಯವೆಂದು ತ್ಯಜಿಸಿ, ಮರಳಿ ಪಡೆದು ನಿನಗೆ ಪಾತ್ರವಾದರು. ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಂತೆಯೊಳಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಅಂತಕಾಂತಕ ಶ್ರೀಗುರುಮೂರ್ತಿ ತನ್ನರುಹಿನ ರೂಪವಿಂತೆಂದು ತೋರಿದ ಕಲ್ಲೇ ನಿಜಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶಿವನ ನೆನೆದಡೆ ಭವ ಹಿಂಗೂದೆಂಬ ವಿವರಗೇಡಿಗಳ ಮಾತ ಕೇಳಲಾಗದು. ಹೇಳದಿರಯ್ಯಾ, ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ? ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ? ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ? ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ, ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು.
--------------
ಅಮುಗಿದೇವಯ್ಯ
ಸುವರ್ಣಕ್ಕೆ ಅಲಂಕಾರಕ್ಕೆ ಭೇದವುಂಟೆ ಅಯ್ಯಾ? ಜ್ಯೋತಿಗೆ ಪ್ರಕಾಶಕ್ಕೆ ಭೇದವುಂಟೆ ಅಯ್ಯಾ? ನೂಲಿಂಗೆ ಪಟಕ್ಕೆ ಭೇದವುಂಟೆ ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣಂಗೆ ನನಗೆ ಭೇದವುಂಟೆ ಅಯ್ಯಾ? ಇಲ್ಲ ನೋಡಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
್ಕಳಿದು ್ಕಳಿದು ವಿಷಯಕ್ಕೆ ಮೈಗೊಟ್ಟಡೆ ಅನುಭಾವಿಯೆ, ಅಯ್ಯಾ? ಅಳಿದು ಅಳಿದು ಆನಂದಕ್ಕೆ ಮೈಗೊಟ್ಟಡೆ ಅಜ್ಞಾನಿಯೆ, ಅಯ್ಯಾ? ್ಕಳಿದ ಬಳಿಕ ವಿಷಯಗಳಳಿಯಬೇಕು. ಅಳಿದ ಬಳಿಕ, ಎಳೆಯ ಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನನಾಗಲೆಬೇಕು.
--------------
ಸಿದ್ಧರಾಮೇಶ್ವರ
ಸರ್ವರೂ ದ್ರವ್ಯವಂತರು; ಅವರು ಅವರಲ್ಲಿ ಆಸೆಯೆ ಅಯ್ಯಾ? ಮಾಯಾವಿರಹಿತ, ಮಾಯಾಕೋಲಾಹಲ ಪಾದವಿತ್ತುದಕವೆ ಪಾದೋದಕ, ಮೋಕ್ಷದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತಲೆಯೊಳಗಳ ಬಾಯಲ್ಲಿ ಹಲವು ರುಚಿಯಿಲ್ಲದೆ ಕೆಳಗಳ ದ್ವಾರದಲ್ಲಿ ಉಣಬಹುದೆ ಅಯ್ಯಾ? ಹಿಡಿವುದನರಿತು, ಹಿಡಿದು ಬಿಡುವುದನರಿತು, ಬಿಟ್ಟು ಇಷ್ಟಪ್ರಾಣವನೊಡಗೂಡಬೇಕಲ್ಲದೆ, ಇಷ್ಟವಿಲ್ಲದ ಪ್ರಾಣ ವಸ್ತುವೆಂಬ ಮಿಟ್ಟೆಯ ಭಂಡರ ಮೆಚ್ಚುವನೆ, ಎನ್ನ ಸದಾಶಿವಮೂರ್ತಿಯನರಿತ ನಿರಂಗ?
--------------
ಅರಿವಿನ ಮಾರಿತಂದೆ
ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು. ಅದೆಂತೆಂದಡೆ: ಸತಿಪುರುಷರಿಗೆ ಸಂಯೋಗವಲ್ಲದೆ, ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ? ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ? ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ? ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ? ಪರದಲ್ಲಿ ಪರಿಣಾಮಿಯಾದ ಶರಣ, ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ? ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ? ಮರೆವುದು ಅರಿವುದು ಎರಡುಳ್ಳನ್ನಕ್ಕ, ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಕಾಮಿಯ ಕಾಮಿನಿಯು ನೋಡಿದಳೆಂಬಂತೆ, ಉಪಾಧಿಯ ನಿರುಪಾಧಿ ಲಿಂಗದ ಕೃಪೆಯಾಯಿತ್ತೆಂಬಂತೆ ನುಡಿವರಯ್ಯಾ. ಕಾಮಿನಿಯ ದೃಷ್ಟಿ ಕಾಮಿಯಲ್ಲಿರಲು ಕಾಮಿಯೆ ಅಯ್ಯಾ? ಲಿಂಗದ ದೃಷ್ಟಿ ಅಂಗಗುಣದವನಲ್ಲಿರಲು ಆತ ಲಿಂಗಗುಣಿಯೆ? ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->