ಮ ಪದದಿಂದ ಪ್ರಾರಂಭವಾಗುವ ವಚನಗಳು:
ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ.ಐದಾರು ಕಣೆಯದಿಂ ಮೇಲೆ ದುರ್ಗ.ಕಾಲಾಳು ನಾಯಕರು, ಮೇಲೆ ರಥಪಾಯಕರು,ಆರೈದು ಓರಂತೆ ದುರ್ಗದಲ್ಲಿ.ಧಾರುಣಿಯ ಕಳ್ಳರಿಗೆ ತಾನಂಜಿ ದುರ್ಗದೊಳುಓರಂತೆ ಅಡಗಿರ್ದಾತ, ಶ್ರೀಮಲ್ಲಿಕಾರ್ಜುನ.
ಮೃಗಕ್ಕೆಂದು ಬಿಲ್ಲ ಹಿಡಿದು ಶರವ ತೊಟ್ಟೆ ನಾನು.ಮೃಗ ತಪ್ಪಿ ಶಿವ ದೊರಕೊಂಡನೆನಗೆ.ಅನುಪಮ ದುರಿತವ ಕೆಡಿಸಲೆಂದು,ಹೊಲೆಯನ ಕುಲಜನ ಮಾಡಿದ, ಶ್ರೀಮಲ್ಲಿಕಾರ್ಜುನ.