ಅಥವಾ
(1) (1) (1) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (2) (2) (1) (0) (0) (1) (2) (0) (0) (0) (0) (0) (0) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವ ನೈದಿಸಿದ ಗುರು ಬಸವಣ್ಣನೇ ಆಮೋದದಲಿ ಕೂಟ. ಆನಂದ ಸಾನಂದ ತಾನೊಂದು ರೂಪಾಗಿ ಸ್ವಾನುಭಾವದ ದೀಕ್ಷಾಪನ್ನವಯವಾ ಭಾನುಮಂಡಲದಲ್ಲಿ ತಾರೆ ಮಧುಕರನೊಪ್ಪೆ ಅನ್ಯಯ (?) ನಿನ್ನ ಗುಣವರಿಯಲ್ಕೆ ಚೆನ್ನಬಸವ ಅಯ್ಯನಾದನೆನಗೆ ಶ್ರೀಮಲ್ಲಿಕಾರ್ಜುನಾ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ನಿನ್ನೆ ಹುಟ್ಟಿದ ಮಾನವರೆಲ್ಲರೂ ಇದು ಸಾಸಂಗಿಗೇಕೆಂಬರಯ್ಯಾ. ಕಾಳ ಕುಳ ಭುವನಲೋಕಂಗಳು ನಾವು ಸಂಗಿಗಳೇಕೆನ್ನರಯ್ಯಾ. ಎಲ್ಲಾ ಸಾಸಂಗಿಗಳಾದಡೆಯೂ ಲೋಕಂಗಳು ನಡೆಯರೆಂದು, ತಾನೊಬ್ಬನೆ ಸಾಸಂ[ಗಿಗ]ನಾದನು, ಶ್ರೀಮಲ್ಲಿಕಾರ್ಜುನಯ್ಯನು.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ