ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲಿ ನೋಡಿದರೆನ್ನಯ ಮನವಿಪ್ಪುದು. ಜಗದಗಲದಲ್ಲಿ ನೋಡಿದರೆನ್ನ ಮನವಿಪ್ಪುದು. ಸಪ್ತಸಾಗರದಿಂದತ್ತತ್ತವೆನ್ನಯ ಮನವಿರುತ ಚರಿಸುತಿಪ್ಪುದು. ಸಾಕ್ಷಿ ಗ್ರಂಥ : ``ಮಕಾರಂ ಮರುತರೂಪಯೋ ನಕಾರಂ ನಾಹಂ ಕೋಹಂ | (?) ಅಕ್ಷರದ್ವಯ ಮನೋ ನಾಮ ಸರ್ವದಾ ಸಮಾಶ್ರೀತಂ ||'' ಎಂದುದಾಗಿ, ಮನವೆಂಬ ವಾಯು ಹರಿದು ಗಳಿಗೆ ಗಳಿಗೆಗೆ ಒಂದೊಂದು ನೆನೆನೆನೆದು ಹಂಬಲಿಸಿ ಹತವಾಗುತಿದೆ. ಮನದ ಗಂಧೆಯ ತುರುಸಿದರೆ ಸುಖವಾಗುತಿದೆ. ಸುಖದಿಂದ ದುಃಖ, ದುಃಖದಿಂದ ಪ್ರಳಯಕ್ಕಿಕ್ಕಿ ಕೊಲ್ಲುತಿದೆ ಮನ. ಮನವೆಂಬ ಮಾಯದ ಬಲೆಯಲೆನ್ನ ಕೆಡವದೆ ಉಳುಹಿಕೊಳ್ಳಯ್ಯ ನಿರ್ಮಳ ನಿರ್ಮಳಾತ್ಮಕ ಜಗದಾರಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎರಡು ಹೆಸರಿನ ಮರದ ಬೊಡ್ಡೆಯಲಾಡುವಾಲಿಯ ಮನೆ ಏಳು ಬಗೆಯ ನಿರ್ಮಿತ, ಹತ್ತು ಬಗೆಯ ಹರವರಿ, ಒಂಬತ್ತು ಬಗೆಯ ಹಾದಿ. ಆ ಮನೆಯ ಪಂಚಾಳರು ರಚಿಸಿದರು ನೋಡಾ ! ಮನೆಯೊಳಗೆ ಮಧುರದ ಪಾಕವಾಗುತಿರೆ, ಆ ಮಧುರದ ಸವಿಗೆಟ್ಟು, ಹೊತ್ತಿ, ಹೊಗೆ ಮನೆಯ ಸುತ್ತಿದುದ ಕಂಡು, ಕೆಟ್ಟಡಿಗೆಯನಟ್ಟು, ಶುದ್ಧ ಮಾಡುವೆನೆಂದು, ಹಿಂದಣ ಮನೆಯ ಸುಟ್ಟು, ಮುಂದೊಂದು ಮನೆಯ ಕಟ್ಟಿ, ಅಂದಚೆಂದವ ನೋಡಿ, ಆಡಿಸುತ್ತಿದ್ದ ಭೇದವ ನೀನೆ ಬಲ್ಲೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎಂದಾದರೂ ಸಂಸಾರದಂದುಗ ಬಿಡುದು ನೋಡಯ್ಯಾ ! ಎಂದಾದರೂ ಸಂಸಾರಬಂಧನ ಬಿಡದು ನೋಡಯ್ಯಾ ! ಎಂದಾದರೂ ಸಂಸಾರವಿಷಯ ಹಿಂಗದು ನೋಡಯ್ಯಾ ! ಸಂಸಾರದಂದುಗ ಕಳೆದು ನಿರ್ದಂದುಗನಾಗಿಪ್ಪುದು ಎಂದೊ ಎಂದೊ ? ನಿಮ್ಮ ನೆನವು ನೆಲೆಗೊಂಬುದು ಎಂದೊ ಎಂದೊ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ಪಿಂಡದೊಳು ಹೊಳೆಯುತಿಹ ಜ್ಞಾನ, ಸೋಮ ಸೂರ್ಯರ ಪ್ರಕಾಶವ ಮೀರಿತ್ತು, ಜಗವ ಮೀರಿತ್ತು, ಜಗದಗಲವ ಮೀರಿತ್ತು, ಸ್ವಯಪರವ ಮೀರಿತ್ತು. ಕಾರಣ, ಎನ್ನ ಆತ್ಮ ಸ್ವಯಜ್ಯೋತಿಯಾಗಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ