ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಕ್ಕೆ ಮಜ್ಜನವ ಮಾಡಿದಲ್ಲಿ ತನುವಿನಾವಿಷ್ಕಾಂತದ ಕೇಡು. ಕುಸುಮವ ಧರಿಸುವಲ್ಲಿ ಮನದ ಪ್ರಕೃತಿಯ ಕೇಡು. ನೈವೇದ್ಯವ ಸಮರ್ಪಿಸುವಲ್ಲಿ ಸರ್ವ ಇಂದ್ರಿಯಂಗಳ ಕೇಡು. ಕಾಯಕ್ಕೆ ಮಜ್ಜನ, ಚಿತ್ತದ ವಿಲಾಸಿತಕ್ಕೆ ಕುಸುಮ. ಮನ ಘನದಲ್ಲಿ ನಿಂದುದಕ್ಕೆ ಅರ್ಪಿತ. ಇಂತೀ ತ್ರಿವಿಧದ ಮರೆಯಲ್ಲಿ ಕುರುಹುದೋರಿದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಲಂದಣಗಿತ್ತಿಯ ಮಾತು ಬಂದಿಕಾರರ ಜಗಳದಂತೆ ಕಂಡವರಲ್ಲಿ ತಂದು ಮಾಡುವನ ಮಾಟ ಸಾಕಿಕೊಂಡಿಹನ ದಯದಂತೆ. ಆ ಮಾಟದ ಅಂದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ