ಗ ಪದದಿಂದ ಪ್ರಾರಂಭವಾಗುವ ವಚನಗಳು:
ಗೋವು ಮೊದಲು ಚತುಃಪಾದಿ ಜೀವಂಗಳುತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯಬೀಡಿಂಗೆ ಹೋಹಂತೆ,ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.ಬಂದುದ ಮರೆದ ಬಂಧಜೀವಿಗ ನಾನಾಗಿಜೀವಕಾಯದ ಸಂದ ಬಿಡಿಸು.ಬಿಂದು ನಿಲುವ ಅಂದವ ಹೇಳು,ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.