ಅಥವಾ
(3) (3) (0) (0) (0) (0) (0) (0) (0) (0) (1) (1) (0) (0) ಅಂ (1) ಅಃ (1) (3) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (3) (0) (3) (2) (3) (0) (0) (0) (0) (0) (0) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರತಿಷ್ಠೆಗೆ ಮಾಟವಲ್ಲದೆ ಸ್ವಯಂಭುಗುಂಟೆ ಉಳಿ ? ನನಗೂ ನಿನಗೂ ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿವುದಕ್ಕೆ ಬೇರೊಂದು ಠಾವುಂಟೆ ಮಾರಯ್ಯಾ ?
--------------
ಆಯ್ದಕ್ಕಿ ಲಕ್ಕಮ್ಮ
ಪ್ರಭುದೇವರು, ಸಿದ್ಧರಾಮಯ್ಯದೇವರು, ಮಡಿವಾಳ ಮಾಚಯ್ಯ, ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಸಕಲಪ್ರಮಥಗಣಂಗಳು ನೇಮ ನಿತ್ಯದ ಜಂಗಮಲಿಂಗ ಮುಂತಾದ ಸರ್ವಸಮೂಹಕ್ಕೆ ತ್ರಿಕರಣಶುದ್ಧವಾಗಿ ಭಾವಭ್ರಮೆಯಡಗಿ ಜೀವವಿಕಾರ ನಿಂದು ಮಾಡುವ ಮಾಟದ ಸಮಯದಿಂದವೆ ಮಾರಯ್ಯಪ್ರಿಯ ಅಮಲೇಶ್ವರಲಿಂಗದಲ್ಲಿಯೆ ಐಕ್ಯ.
--------------
ಆಯ್ದಕ್ಕಿ ಲಕ್ಕಮ್ಮ
ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣಬಂದಿತ್ತು. ಮಾಟವುಳ್ಳನ್ನಕ್ಕ ಮಹಾಪ್ರಮಥರ ಭಾಷೆ ಭಾಗ್ಯ ದೊರೆಕೊಂಡಿತ್ತು. ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು. ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ, ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಕೂಡುವ ಕೂಟ.
--------------
ಆಯ್ದಕ್ಕಿ ಲಕ್ಕಮ್ಮ