ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿತ್ತಿದ ಬಿತ್ತು, ಪೃಥ್ವಿಯ ಕೂಟ ಅಪ್ಪುವಿನ ದ್ರವದಿಂದ ಮಸ್ತಕ ಒಡೆವುದಲ್ಲದೆ, ಉಷ್ಣದ ಡಾವರಕ್ಕೆ, ಬೆಂಕಿಯ ಬೇಗೆಗೆ ಮಸ್ತಕ ಒಡೆವುದುಂಟೆ ? ಲಿಂಗವು ಭಕ್ತಿಯ ಶ್ರದ್ಧೆಗೆ, ವಿಶ್ವಾಸದ ಸುಸಂಗಿಗೆ, ನಿಶ್ಚಯವಪ್ಪ ಲಿಂಗಿಗೆ ದೃಷ್ಟವಪ್ಪುದಲ್ಲದೆ, ಉನ್ಮತ್ತವಪ್ಪ ವಿಶ್ವಾಸಘಾತಕಂಗೆ, ವಂದಿಸಿ ನಿಂದಿಸುವಂಗೆ, ಹಿಂದೆ ಮುಂದೆ ಬಂದುದ ಬಾಯ್ಗಿಡುವವಂಗೆ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಸಂಧಿಸನವಗೆ
--------------
ಮೋಳಿಗೆ ಮಹಾದೇವಿ
ಗಂಪಕ್ಕೆ ಸಿಕ್ಕೆ, ಬಲೆಗೊಳಗಾಗೆ, ಗೂಳಿಯ ಇರಿತದ ಡಾವರಕ್ಕೆ ನಿಲ್ಲೆ, ಸೆಳೆಗೋಲಿನ ಗಾಣದ ಕೀಟಕವನೊಲ್ಲೆ. ನಿನ್ನಾಟ ಅದೇತರ ಮಡುವಿನಾಟ ಹೇಳಾ, ಕದಕತನ ಬೇಡ ಕದಂಬಲಿಂಗಾ.
--------------
ಗೋಣಿ ಮಾರಯ್ಯ
ಎಲ್ಲವ ಮೀರಿ ಶೀಲವಂತನಾದಲ್ಲಿ ರೋಗವೆಲ್ಲಿಂದ ಬಂದಿತು ? ಆ ಗುಣ ತನುವಿನಲ್ಲಿಯ ತೊಡಕು ; ರುಜೆ ಪ್ರಾಣವ ಕೊಳ್ಳಲರಿಯದು. ಅಂಗದ ಡಾವರಕ್ಕೆ ಸೈರಿಸಲಾರದೆ, ಮದ್ದ ತಾ ಲಿಂಗಕ್ಕೆ ತೋರಿ, ಜಂಗಮಕ್ಕೆ ಕೊಟ್ಟು, ಜಂಗಮಪ್ರಸಾದವೆಂದು ಲಿಂಗ ಜಂಗಮವ ಹಿಂಗದೆ ಕೊಳ್ಳೆಂದು ಹೇಳುವ ಅನಂಗಿಗಳಿಗೆ ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ.
--------------
ಅಕ್ಕಮ್ಮ
ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ. ಮೂರ ಮರೆದು ಬೇರೊಂದ ಕಂಡೆಹೆನೆಂಬುದೆ ಮಾಯೆ. ನುಡಿಯ ನುಡಿವವರಲ್ಲಿ ಎಡೆ ಮಾತನಾಡಿ ಬೇರೊಂದೆಡೆವುಂಟೆಂಬುದೆ ಮಾಯೆ. ಘಟಮಟವೆಂಬ ಮನೆಯಲ್ಲಿ ಮರವೆಯೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಡಾವರಕ್ಕೆ ಸಿಕ್ಕಿ ನೊಂದೆನು. ಇದರಚ್ಚುಗವ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ನವನೀತವ ಅರೆದು ಸಣ್ಣಿಸಬೇಕೆಂದಡೆ, ಅದು ಉಭಯ ಪಾಷಾಣದ ಮಧ್ಯದಲ್ಲಿ ಜ್ವಾಲೆಯ ಡಾವರಕ್ಕೆ ಕರಗುವದಲ್ಲದೆ ಅ[ರೆ]ಪುನಿಂದುಂಟೆ? ನೆರೆ ಅರಿದು ಹರಿದವನಲಿ ಪರಿಭ್ರಮಣವ ವಿಚಾರಿಸಲಿಕ್ಕೆ ಆ ವಿಚಾರದಲ್ಲಿಯೆ ಲೋಪವಾಯಿತ್ತು, ಸದ್ಯೋಜಾತಲಿಂಗದಲ್ಲಿ
--------------
ಅವಸರದ ರೇಕಣ್ಣ
-->