ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ? ಕಾಯವುಳಿದು ಕೈಲಾಸಕ್ಕೆ ಹೋಗಬೇಕೆಂಬುದು, ಜೀವನ ಉಪಾದ್ಥಿಕೆ. ಘಟಮಟಪಟನ್ಯಾಯ ಇವೆಲ್ಲವು ಬಯಲೊಳಗು. ಅರ್ಕೇಶ್ವರಲಿಂಗವನರಿದು ಕೂಡಿದ ಮತ್ತೆ, ಅಂಗ ಸಿಕ್ಕುವುದಕ್ಕೆ ಠಾವಿಲ್ಲ.
--------------
ಮಧುವಯ್ಯ
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ : ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು. ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ. ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು. ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ. ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು. ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ. ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ. ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ. ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ? ಹಿರಿದಹ ಗಿರಿಯ ಹತ್ತಿ, ಬಿದಿರೆಲೆಯ ತರಿದ[ವ]ನಂತೆ, ಒಂದ ಬಿಟ್ಟೊಂದ ಹಿಡಿದಡೆ ಅದೆಲ್ಲಿಯ ಚಂದ? ಹಿಂಗುವುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕತ್ತಲೆಯ ಉದಕದಲ್ಲಿ ಮತ್ಸ್ಯ ಹುಟ್ಟಿದುದ ಕಂಡೆ. ಮತ್ಸ್ಯಕ್ಕೆ ಮೂರು ಗರಿ, ಮರಿಗೆ ಆರು ಗರಿ. ಮರಿ ಮತ್ಸ್ಯವ ನುಂಗಿತ್ತೊ ? ಅದು ತಾಯ ಬಸುರಲ್ಲಿ ಬಸರಿಕ್ಕಿತ್ತೊ ? ಕೆರೆಯೊಡೆದು ಇಹುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ, ತನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ ? ಬೊಬ್ಬುಲಿಯನೇರಿದ ಮರ್ಕಟನಂತೆ ಹಣ್ಣ ಮೆಲ್ಲಲಿಲ್ಲ, ಕುಳ್ಳಿರೆ ಠಾವಿಲ್ಲ. ನಾನು ಸರ್ವಸಂಗಪರಿತ್ಯಾಗಮಾಡಿದವಳಲ್ಲ, ನಿಮ್ಮ ಕೂಡಿ ಕುಲವಳಿದವಳಲ್ಲ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ , ಒಳಹೊರಗೆಂಬುದು ಒಂದೇ ಭೇದವಾದ ಕಾರಣ ಕುಡಿಕೆಯ ಘೃತ ಅಗಲಿಕೆ ಬಂದಂತೆ, ಅದು ಮುಂದಣ ಬಯಕೆ. ಇದು ಇಂದಿನ ಇರವು ಎಂಬುದನರಿದಲ್ಲಿ, ಉಂಟು, ಇಲ್ಲಾ ಎಂಬ ಸಂದೇಹ ಹರಿಯಿತ್ತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ಮೂರ ಮುದುಡಿಸಿ ಆರನಡಗಿಸಿ ಎಂಟ ಗಂಟಿಕ್ಕಿ ನಾಲ್ಕು ಸೆರಗ ಹಾಸಿ ಎರಡರಲ್ಲಿ ಬಂಧಿಸಿ ಒಂದುಗೂಡಿ ಮಂಡೆಯ ಮೇಲೆತ್ತಿದವಂಗೆ ಮತ್ತೆ ಅವು ಹಿಂಗುವ ಠಾವಿಲ್ಲ, ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು. ಮೂಲವಡಗಿದ ರೂಪಿಂಗೆ ಮುಕ್ತಳಾದೆನು. ಮುನ್ನಲೊಂದು ಸುಖವ ಕಂಡು ಮೂಲಾಧಾರ ರೂಪವರಿ. ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು. ನಾನು ಹೆಣ್ಣು ರೂಪವಳಿದು ಮುಕ್ತ್ಯಂಗನೆಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
-->