ಅಥವಾ

ಒಟ್ಟು 9 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಪಿ ಕಳ್ಳ ಕುಡಿದು, ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು, ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು. ಆದಿಯಲ್ಲಿ ನಿನ್ನ ಗರ್ಭಾಂಬುದ್ಥಿಯಲ್ಲಿ ಜನಿಸಿ, ನಿನ್ನ ನೆನಹಿಲ್ಲದೆ, ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ, ಪ್ರಾಣಲಿಂಗವನರಿಯದ ಪರಮಪಾತಕರ, ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ, ತಂದೆ-ತಾಯಿ ಬಂಧು-ಬಳಗವೆಂದು, ಭಾವಿಸಿದ ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ, ನಿಂದ ಠಾವಿಂಗೆ ನೀರ್ದಳಿವರಯ್ಯ. ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ. ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ. ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ. ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ, ಮಾಡಿತಯ್ಯ ಎನ್ನ ಮಾಯೆ. ಒರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ. ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ. ನಿನ್ನನೇ ಜನನೀ ಜನಕರೆಂಬ, ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು, ಜಾಗ್ರತ್ಸ ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ, ಅಕ್ಕರಿಂದ ರಕ್ಷಿಪುದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ನನ್ನ ನಾನರಿವಡೆ, ಮೂರು ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ, ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ ಠಾವಿಂಗೆ ತಪ್ಪಿಹೋದ ಮೂಷಕನಂತೆ, ಎತ್ತಲೆಂದರಿಯೆ.ಅರ್ತಿಯಿಂದ ಕಟ್ಟಿದೆ ಇಷ್ಟವ. ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ಮನವಿದು ಕ್ಷಣದೊಳಗೆ ಹೋಗದ ಠಾವಿಗೆ ಹೋದಂತೆ ನೆನೆವುತ್ತಿದೆ. ಬಾರದ ಠಾವಿಂಗೆ ಬಂದಂತೆ ನೆನೆವುತ್ತಿದೆ. ಕಾಣದುದ ಕಂಡಂತೆ ನೆನೆವುತ್ತಿದೆ. ಕೇಳದುದ ಕೇಳಿದಂತೆ ನೆನೆವುತ್ತಿದೆ. ಕ್ಷಣದೊಳಗೆ ದಶದಿಕ್ಕಿಗೈಯುತ್ತಿದೆ. ಶತಮರ್ಕಟವಿಧಿ ಬಂದು ಮನಕ್ಕಾದರೆ ಇದನೆಂತು ತಾಳಬಹುದಯ್ಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಈ ಮನವ ಸೆರೆಯಿಟ್ಟಾಳಯ್ಯಾ ನಿಮ್ಮ ಧರ್ಮ ಬೇಡಿಕೊಂಬೆ.
--------------
ಸ್ವತಂತ್ರ ಸಿದ್ಧಲಿಂಗ
ನೋಡುವ ನೋಟ ಕೂಡಿ ಬಯಲಲ್ಲಿ ಸಿಕ್ಕಿ, ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ, ಲೋಕಾದಿಲೋಕವ ನೋಡುತ್ತ, ಬೇಕಾದ ಠಾವಿಂಗೆ ಹೋಗುತ್ತ, ಆತ್ಮನೊಳು ಬೆರೆವುತ್ತ, ಮಾತಿನ ಕೀಲನರಿವುತ್ತ, ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ ಏತರೊಳಗೂ ಸಿಲುಕದೆ ಆಡುವ ಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ ಬಳನೆ ಬಳನೆ ಮೇದು ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ. ಆ ಪಶುವಿಂಗೆ ಕಟ್ಟು ಗೊತ್ತಿಲ್ಲ, ಕಾವ ಕಟ್ಟಿಗೆ ಒಳಗಲ್ಲ. ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು, ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ, ಕಾಲಕರ್ಮವಿರಹಿತ ತ್ರಿಪುರಾಂಕ ಲಿಂಗದೊಳ-ಗಾದವಂಗೆ. ಕೂಗಿನ ಮಾರಯ್ಯನ ವಚನ
--------------
ಶಂಕರದಾಸಿಮಯ್ಯ
ಕಾಯಸೂತಕಿಗಳು ಕರ್ಮಕ್ಕೊಳಗು. ಜೀವಸೂತಕಿಗಳು ಭವಕ್ಕೆ ಬೀಜ. ಮತ್ತಾವ ಸೂತಕಿಗಳೆಲ್ಲರು ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಠಾವಿಗೆ ಒಳಗು. ಪ್ರಸೂತವಾಗಿ ಹೊರಗಾದಲ್ಲಿ ಏನೂ ಎಂದೆನಲಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು. ಮೂಲವಡಗಿದ ರೂಪಿಂಗೆ ಮುಕ್ತಳಾದೆನು. ಮುನ್ನಲೊಂದು ಸುಖವ ಕಂಡು ಮೂಲಾಧಾರ ರೂಪವರಿ. ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು. ನಾನು ಹೆಣ್ಣು ರೂಪವಳಿದು ಮುಕ್ತ್ಯಂಗನೆಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
-->